ಇಸ್ರೇಲ್ ಎಂಬ ಪುಟ್ಟ ಹಾಗು ವಿಶ್ವದ ಶಕ್ತಿಶಾಲಿ ರಾಷ್ಟ್ರ ಭಾರತವನ್ನ ಅಷ್ಟು ಪ್ರೀತಿಸುವುದು ಯಾಕೆ?

ಇಸ್ರೇಲ್ ಎಂಬ ರಾಷ್ಟ್ರ ಭಾರತವನ್ನ ಅದ್ಯಾಕೆ ಅಷ್ಟು ಪ್ರೀತಿಸುತ್ತೆ, ಭಾರತವನ್ನ ತನ್ನ ಆತ್ಮೀಯ ಮಿತ್ರ ಅಂತ್ಯಾಕೆ ಕರೆಯುತ್ತೆ?

ಭಾರತಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಇಲ್ಲಿಯವರೆಗೆ ಇಸ್ರೇಲ್’ಗೆ ಭಾರತದ ಯಾವ ಪ್ರಧಾನಿಯೂ ಭೇಟಿ ನೀಡಿರಲಿಲ್ಲ, ಕಾರಣ ಇಸ್ರೇಲಿಗೆ ಭೇಟಿ ಕೊಟ್ಟರೆ ತಮ್ಮ “ಸೆಕ್ಯೂಲರಿಸಮ್ಮಿಗೆ” ಎಲ್ಲಿ ಧಕ್ಕೆ ಬಂದು ನಮ್ಮ ದೇಶದ ಮುಸಲ್ಮಾನರ ಹಾಗು ಅರಬ್ ರಾಷ್ಟ್ರದ ವಿರೋಧ ಕಟ್ಟಿಕೊಳ್ಳಬೇಕಾಗುತ್ತೋ ಅಂತ ಇಲ್ಲಿಯವರೆಗೆ ಇಸ್ರೇಲ್’ಗೆ ಭಾರತದ ಯಾವ ಪ್ರಧಾನಿಯೂ ಭೇಟಿ ನೀಡಿರಲಿಲ್ಲ.

ಆದರೆ 70 ವರ್ಷಗಳಿಂದ ಮಾತ್ರವಲ್ಲ 2000 ವರ್ಷಗಳಿಂದ ಇಸ್ರೇಲ್ ಭಾರತದ ರಾಜನಿಗಾಗಿ ಕಾಯುತ್ತಿತ್ತೆಂದರೆ ನೀವು ನಂಬುತ್ತೀರಾ?

ಅಷ್ಟಕ್ಕೂ ಭಾರತ ಇಸ್ರೇಲ್ ನಂಟಾದರೂ ಏನು? ಇಸ್ರೇಲ್ ಯಾಕೆ ಭಾರತದ ರಾಜನಿಗಾಗಿ ಕಾದು ಕುಳಿತದ್ದು?

ಕಾರಣವಿದೆ ಸ್ನೇಹಿತರೆ…

ಅದು ಕ್ರಿ.ಪೂ.135, ಗ್ರೀಕ್’ನ ಕ್ರೂರ ರಾಜ #ಆ್ಯಂಟಿಯೋಕಸ್_ಎಪಿಫೇನ್ಸ್(Antiochus Epiphanes) ಯಹೂದಿಗಳ ಎರಡನೆಯ #Synogogue(ಯಹೂದಿಗಳ ಪವಿತ್ರ ಮಂದಿರ) ನ್ನ ಅಪವಿತ್ರಗೊಳಿಸಿದ್ದ.

ಕ್ರಿ.ಶ. 70, #ಟೈಟಸ್(Titus) ಜೇರುಸಲೆಂನ್ನ ವಶಪಡಿಸಿಕೊಂಡು 1 ಲಕ್ಷ ಯಹೂದಿಗಳನ್ನ ಕೊಂದು ಮುಗಿಸಿದ್ದ.

ಕ್ರಿ.ಶ. 136, ಬರೊಬ್ಬರಿ ಐದು ಲಕ್ಷ ಎಂಭತ್ತು ಸಾವಿರ ಯಹೂದಿಗಳ ಮಾರಣಹೋಮ ಹಾಗು 985 ನಗರಗಳ ನಾಶ ಮಾಡಿದ್ದ.

ಕ್ರಿ.ಶ.306, #ಸ್ಪೇನ್ ಯಹೂದಿಗಳನ್ನ ತನ್ನ ದೇಶದಿಂದ ಓಡಿಸಿತ್ತು.

ಕ್ರಿ.ಶ.325, #ಕಾನ್ಸ್ಟಂಟೈನ್(Constantine) ಯಹೂದಿಗಳನ್ನ ಅಸ್ಪೃಶ್ಯರಾಗಿ ಕಾಣೋಕೆ ಶುರು ಮಾಡಿದ್ದು.

ಕ್ರಿ.ಶ. 379, “ಚಿನ್ನದ ನಾಲಿಗೆಯ ಬಿಷಪ್” ಎಂದು ಕರೆಸಿಕೊಳ್ಳುತ್ತಿದ್ದ #ಸೇಂಟ್_ಆ್ಯಂಬ್ರೋಸ್(Saint Ambrose) ಯಹೂದಿಗಳ ಪವಿತ್ರ ದೇವಾಲಯವಾದ Synagogue ನ್ನ ಸುಟ್ಟು ಹಾಕೋಕೆ ಕ್ರಿಶ್ಚಿಯನ್ನರಿಗೆ ಪ್ರೇರೇಪಿಸಿದ್ದು ಹೇಗೆ ಗೊತ್ತಾ?
ಒಮ್ಮೆ ಆತ ಭಾಷಣ ಮಾಡುತ್ತ ಯಹೂದಿಗಳ ಬಗ್ಗೆ ಹೇಳಿದ್ದು ಹೀಗೆ “ಯಹೂದಿಗಳು ಅತೀ ಕೆಟ್ಟ ಮನುಷ್ಯರು, ಕಾಮುಕರು, ಆಸೆಬುರುಕರು, ಸುಲಿಗೆಕೋರರು, ಅವರು ನಮ್ಮ ದೇವರಾದ ಏಸು ಕ್ರಿಸ್ತನನ್ನ ಕೊಂದ ಕ್ರೂರಿಗಳು, ಈ ಭೂಮಿಯ ಮೇಲಿರೋ ಯಾವ ಯಹೂದಿಗಳನ್ನೂ ದೇವರು ಪ್ರೀತಿಸುವುದಿಲ್ಲ. ಎಲ್ಲ ಕ್ರಿಶ್ಚಿಯನ್ನರೂ ಯಹೂದಿಗಳನ್ನ ಕಂಠಮಟ್ಟ ದ್ವೇಷಿಸಬೇಕು, ಕಂಡಲ್ಲಿ ಅವರನ್ನ ಕೊಲ್ಲಿ”, ಆತನ ಹೇಳಿಕೆಯ ಪರಿಣಾಮ ಮತ್ತೆ ಲಕ್ಷಾಂತರ ಯಹೂದಿಗಳ ಕಗ್ಗೊಲೆ.

ಕ್ರಿ.ಶ.395, #ಸೇಂಟ್_ಗ್ರೆಗೋರಿ(Saint Gregory) ಕೂಡ ಯಹೂದಿಗಳ ವಿರುದ್ಧ ಕ್ರಿಶ್ಚಿಯನ್ನರ ಕೆಂಡಕಾರಿಸಿ ಸಾವಿರಾರು ಯಹೂದಿಗಳ ಮಾರಣಹೋಮಕ್ಕೆ ಕಾರಣನಾದನು.

ಕ್ರಿ.ಶ.415, #ಬಿಷಪ್_ಸೆವೆರಸ್ #ಮಾಗೋನಾ ದಲ್ಲಿದ್ದ ಯಹೂದಿಗಳ ಪ್ರಾರ್ಥನಾ ಸ್ಥಳಗಳನ್ನ ಸುಟ್ಟು, #ಅಲೆಗ್ಸಾಂಡ್ರಿಯಾ ದಿಂದ ಯಹೂದಿಗಳನ್ನ ಹೊರ ಹಾಕಿ ಅನೇಕರನ್ನ ಕೊಲ್ಲಿಸಿದ, ಯಹೂದಿಗಳನ್ನ ಸೆಕ್ಸ್ ಸ್ಲೇವ್ಸ್ ಗಳಾಗಿ ಬಳಸಿಕೊಳ್ಳಲು ಆ ದೇವರು ಕ್ರಿಶ್ಚಿಯನ್ನರಿಗೆ ಆದೇಶಿಸಿದ್ದಾನಂತ ಹೇಳಿ ಅನೇಕ ಯಹೂದಿ ಹೆಣ್ಣುಮಕ್ಕಳ ಮಾನಹರಣಕ್ಕೂ ಕಾರಣನಾಗಿದ್ದ.

ಇದು ಕ್ರಿಶ್ಚಿಯನ್ನರ ಕಾಟವಾದರೆ ಮುಂದೆ ಅಂದರೆ ಕ್ರಿ.ಶ.6 ರಲ್ಲಿ ಪ್ರಾಫೆಟ್ ಮೊಹಮ್ಮದನಿಂದ ಶುರುವಾದ ಇಸ್ಲಾಂ ಕೂಡ ಯಹೂದಿಗಳನ್ನ ಕಂಠಮಟ್ಟ ದ್ವೇಷಿಸುವುದನ್ನ ಬಿಡಲಿಲ್ಲ.

ಕ್ರಿ.ಶ.717 ರಲ್ಲಿ ಅಂದರೆ ಇಸ್ಲಾಂ ಹುಟ್ಟಿ 100 ವರ್ಷಗಳ ನಂತರ ಯಹೂದಿಗಳು ಮುಸಲ್ಮಾನರು ತೊಡುವ ಉಡುಪಿನ ರೀತಿಯಲ್ಲೇ ಬಟ್ಟೆ ಹಾಕಿಕೊಳ್ಳಬೇಕೆಂಬ ಕಾನೂನು ಮುಸಲ್ಮಾನರು ಯಹೂದಿಗಳ ಮೇಲೆ ಹೇರಿದರು.

ಕ್ರಿ.ಶ.1012, ಜರ್ಮನಿಯ ಕಿಂಗ್ #ಹೆನ್ರಿ_II ಯಹೂದಿಗಳನ್ನ ಜರ್ಮನಿಯಲ್ಲಿ ಸಾಮೂಹಿಕ ಹತ್ಯೆ ಮಾಡಿಸುತ್ತಾನೆ.

ಕ್ರಿ.ಶ.1096 ಮೊದಲನೆ #ಕ್ರುಸೇಡ್ (ಮುಸಲ್ಮಾನರ ಜಿಹಾದ್ ರೀತಿಯಲ್ಲೇ ಕ್ರುಸೇಡ್ ಕ್ರಿಶ್ಚಿಯನ್ನರ ಮತಾಂತರದ ಟ್ರಿಕ್) ನ ಸಂದರ್ಭದಲ್ಲಿ #ರೈನಲ್ಯಾಂಡ ನಲ್ಲಿ
ಲಕ್ಷಾಂತರ ಯಹೂದಿಗಳ ಮಾರಣಹೋಮ ಮಾಡಲಾಯಿತು.

ಕ್ರಿ.ಶ. 1190, 1290 #ಇಂಗ್ಲೆಂಡ್ ನಲ್ಲಿ

ಕ್ರಿ.ಶ.1240, 1306 #ಫ್ರಾನ್ಸ್ ನಲ್ಲಿ

ಕ್ರಿ.ಶ.1298, 1510 #ಜರ್ಮನಿ ಯಲ್ಲಿ

ಕ್ರಿ.ಶ.1389, 1480, 1492 #ಸ್ಪೇನ್ ನಲ್ಲಿ

ಕ್ರಿ.ಶ.1483 #ಪೋರ್ಚುಗಲ್ ನಲ್ಲಿ, ಹೀಗೆ ನೂರಾರು ವರ್ಷಗಳಿಂದ ಯಹೂದಿಗಳ ಹತ್ಯೆ ಮಾಡಲಾಯಿತು ಅವರನ್ನ ಬಲವಂತವಾಗಿ ಮತಾಂತರಿಸಿ ಯಹೂದಿ ಹೆಣ್ಣುಮಕ್ಕಳ ಅತ್ಯಾಚಾರ ಮಾಡಲಾಯಿತು.

ಇಷ್ಟೆಲ್ಲ ಘಟನೆಗಳಿಂದ ನೊಂದು ಬೆಂದು ಹೋಗಿದ್ದ ಯಹೂದಿಗಳು ಜರ್ಮನಿಯಲ್ಲಿ ಎರಡನೆಯ ಮಹಾಯುದ್ಧ ಶುರುವಾದಾಗ #ಹಿಟ್ಲರ್’ನ #ನಾಜೀಸಂ ನ ಕ್ರೌರ್ಯಕ್ಕೆ ಬಲಿಯಾಗಿ ಗ್ಯಾಸ್ ಚೇಂಬರ್’ನಲ್ಲಿ ಲಕ್ಷಾಂತರ ಯಹೂದಿಗಳಿ ಉಸಿರುಗಟ್ಟಿ ಪ್ರಾಣ ಬಿಟ್ಟರು.

ಇಷ್ಟೆಲ್ಲ atrocities ಗಳು ಯಹೂದಿಗಳ ಮೇಲಾಗುತ್ತಿರುವಾಗ ಅವರು ಒಂದು ರಾಷ್ಟ್ರದಿಂದ ಇನ್ನೊಂದು ರಾಷ್ಟ್ರಕ್ಕೆ ಪ್ರಾಣಭಿಕ್ಷೆಗಾಗಿ ಹೋದರೆ ಹೋದ ರಾಷ್ಟ್ರಗಳಲ್ಲೆಲ್ಲ ಮಾರಣಹೋಮ ಮತ್ತು “ನಮ್ಮ ರಾಷ್ಟ್ರದಲ್ಲಿ ನಿಮಗೆ ಜಾಗವಿಲ್ಲ” ಅನ್ನೋ ಉತ್ತರದಿಂದ ಕಂಗೆಟ್ಟು ಹೋಗಿದ್ದ ಯಹೂದಿಗಳಿಗೆ 1 ರಾಷ್ಟ್ರ ಮಾತ್ರ 2000 ವರ್ಷಗಳಿಂದ ಆಶಾಕಿರಣವಾಗಿ ನಿಂತದ್ದು ಮಾತ್ರ ನನ್ನ #ಭಾರತ ಒಂದೇ

ಭಾರತಕ್ಕೆ ಯಹೂದಿಗಳು 2000 ವರ್ಷಗಳ ಹಿಂದೆ ಬಂದಿದ್ದರು ಅನ್ನೋ ಕುರುಹುಗಳು ಭಾರತದಲ್ಲಿ ಸಿಗುತ್ತವೆ, ಯಹೂದಿಗಳಿದ್ದ ದೊಡ್ಡ ಹಡಗು ಭಗ್ನವಾಗಿ ಅಳಿದುಳಿದ ಕೆಲ ಯಹೂದಿಗಳು ಮೊದಲು ಬಂದು ಆಶ್ರಯ ಪಡೆದದ್ದು ಭಾರತದಲ್ಲಿ, ಯಾವ ರಾಷ್ಟ್ರದಲ್ಲೂ ಸಿಗದ ಆದರ ಆತಿತ್ಯ ಯಹೂದಿಗಳಿಗೆ ಭಾರತದಲ್ಲಿ ಮಾತ್ರ ಸಿಕ್ಕದ್ದು.

ಜೀವರಕ್ಷಣೆಗಾಗಿ ಭಾರತಕ್ಕೆ ಬಂದ ಯಹೂದಿಗಳಿಗೆ ಭಾರತ ಆಶ್ರಯ ನೀಡಿ ಅವರನ್ನ ಸ್ವಂತ ಮಕ್ಕಳಂತೆ ನೋಡಿಕೊಂಡಿತ್ತು.

ಯಾವ ರಾಷ್ಟ್ರಕ್ಕೆ ಹೋದರೂ ತಮ್ಮ ಆಚರಣೆಗಳನ್ನ, ಸಂಸ್ಕೃತಿಯನ್ನ ಹೇರುತ್ತಿದ್ದ ರಾಷ್ಟ್ರಗಳ ನಡುವೆ ಭಾರತ ಮಾತ್ರ ಯಹೂದಿಗಳಿಗೆ ತನ್ನ ಆಚರಣೆಯನ್ನ ಪಾಲಿಸಲು ಅವಕಾಶ ನೀಡಿತ್ತು. ಅನೇಕ ಯಹೂದಿಗಳು ಭಾರತದಲ್ಲೇ ಉಳಿದು ಇಲ್ಲಿನ ಆಚಾರ ವಿಚಾರ ಸಂಸ್ಕೃತಿಯನ್ನ ಪಾಲಿಸುತ್ತ “We are Proud Indian” ಅಂತ ಎದೆ ತಟ್ಟಿ ಹೇಳಿಕೊಳ್ಳುತ್ತಾರೆ.

ದೇಶ ದೇಶಗಳನ್ನು ಸುತ್ತಾಡಿ ಪ್ರತಿ ರಾಷ್ಟ್ರದಲ್ಲೂ ಮಾರಣಹೋಮ, ಕೊಲೆ, ಅತ್ಯಾಚಾರ ಮಾಡಿಸಿಕೊಂಡ ಯಹೂದಿಗಳಿಗಾಗಿಯೇ 1948 ರಲ್ಲಿ #ಇಸ್ರೇಲ್ ಎಂಬ ರಾಷ್ಟ್ರ ಹುಟ್ಟಿಕೊಂಡಿತು.

ನಂತರ ವಿಶ್ವದಾದ್ಯಂತ ಅಳಿದುಳಿದ ಯಹೂದಿಗಳೆಲ್ಲ ಇಸ್ರೇಲಿಗೆ ತೆರಳಿ ತಮ್ಮ ರಾಷ್ಟ್ರದ ಏಕತೆಗೆ ಕಾರಣರಾದರು, ಭಾರತದ ಅನೇಕ ಯಹೂದಿಗಳೂ ಇಸ್ರೇಲ್ ದೇಶದ ಸ್ಥಾಪನೆಯಾದ ನಂತರ ಒಲ್ಲದ ಮನಸ್ಸಿನಿಂದ ಭಾರತದಿಂದ ಹೊರಟು ತಮ್ಮ ತಾಯ್ನಾಡನ್ನ ಸೇರಿದರು.

“ಭಾರತ ನನ್ನ ಮಾತೃಭೂಮಿ, ಇಸ್ರೇಲ್ ನನ್ನ ಧರ್ಮಭೂಮಿ” ಅಂತ ಒಬ್ಬ ಭಾರತೀಯ ಯಹೂದಿ ಇಂಟರ್‌ವ್ಯೂ ಕೊಡುವಾಗ ಭಾರತದ ಬಗ್ಗೆ ಆತ ಹೇಳಿದ್ದನಂತೆ. ಅಂದರೆ ಅವರಿಗೆ ಭಾರತದೆಡೆಗೆ ಪ್ರೀತಿ ಎಷ್ಟಿದೆಯೆಂಬುದನ್ನ ನೀವು ಅಂದಾಜಿಸಬಹುದು.

ವಿಶ್ವದಾದ್ಯಂತ ಮಾರಣಹೋಮಕ್ಕೊಳಗಾದ ಯಹೂದಿಗಳು ತಮ್ಮ ಸ್ವಂತ ರಾಷ್ಟ್ರ ಇಸ್ರೇಲ್ ಕಟ್ಟಿಕೊಂಡ ನಂತರ ಯಹೂದಿಗಳು ಬೆಳೆದು ನಿಂತ ರೀತಿ ಮಾತ್ರ ಅದ್ಭುತವೇ ಸರಿ.

ಭಾರತಕ್ಕೆ ಸ್ವಾತಂತ್ರ ಸಿಕ್ಕಿದ್ದು 1947, ಇಸ್ರೇಲ್ ಗೆ ಸ್ವಾತಂತ್ರ್ಯ ಸಿಕ್ಕಿದ್ದು 1948 ರಲ್ಲಿ.

ಭಾರತ ತನ್ನ ಸುತ್ತ ಪಾಕಿಸ್ತಾನ, ಚೀನಾ, ಬಾಂಗ್ಲಾದಂಥ ಶತ್ರುರಾಷ್ಟ್ರಗಳಿಂದ ಹೇಗೆ ಸುತ್ತುವರೆದಿದೆಯೋ ಹಾಗೆಯೇ ಇಸ್ರೇಲ್ ಕೂಡ ಸಿರಿಯಾ, ಇರಾಕ್, ಟರ್ಕಿ, ಈಜಿಪ್ಟ್, ಸೌದಿ ಅರೇಬಿಯಾ, ಇರಾನ್, ಪ್ಯಾಲೇಸ್ತೀನ್ ನಂಥ ಶತ್ರು ರಾಷ್ಟ್ರಗಳಿಂದ ಸುತ್ತುವರೆದಿದೆ.

ಭಾರತದ ಮೇಲೆ ಶತ್ರುರಾಷ್ಟ್ರ ಪಾಕಿಸ್ತಾನ 4 ಬಾರಿ ಯುದ್ಧಕ್ಕೆ ಬಂದು ನಾಲ್ಕು ಬಾರಿಯೂ ಸೋತು ಸುಣ್ಣವಾಗಿದೆ.

ಆದರೆ ನಮ್ಮ ಬೆಂಗಳೂರಿಗಿಂತ ನಾಲ್ಕು ಪಟ್ಟು ದೊಡ್ಡದಿರೋ ಪುಟ್ಟ ರಾಷ್ಟ್ರ ಇಸ್ರೇಲ್ ಮಾತ್ರ ಇಲ್ಲೀವರೆಗೂ 17 ಯುದ್ಧ ಕಂಡಿದೆ, ಆ ಎಲ್ಲ ಯುದ್ಧಗಳಲ್ಲೂ ಇಸ್ರೇಲ್’ದ್ದೇ ಮೇಲುಗೈ ಅಂದರೆ ನೀವು ನಂಬಲಸಾಧ್ಯ.

ಇಸ್ರೇಲಿನ ಜನಸಂಖ್ಯೆ ಎಷ್ಟು ಗೊತ್ತೇನು? ಕೇವಲ 85 ಲಕ್ಷ ಮಾತ್ರ, ಅಷ್ಟು ಕಡಿಮೆ ಜನಸಂಖ್ಯೆ ಹೊಂದಿರುವ ರಾಷ್ಟ್ರ ಇಂದು ಜಗತ್ತಿನ ದೊಡ್ಡ ದೊಡ್ಡ ರಾಷ್ಟ್ರಗಳ ಸಾಲಿನಲ್ಲಿ ನಿಂತು ಜಗತ್ತಿಗೆ ತನ್ನ ಶಕ್ತಿಪ್ರದರ್ಶನ ಮಾಡುತ್ತೆ ಅಂದರೆ ಅದಕ್ಕೆ ಕಾರಣ ಇಸ್ರೇಲಿಗರಲ್ಲಿನ ದೇಶಭಕ್ತಿ ಮಾತ್ರ.

“ಯಾರು ಇತಿಹಾಸವನ್ನ ಮರೆಯುತ್ತಾರೊ ಅವರು ಅದೇ ಇತಿಹಾಸಕ್ಕೆ ಬಲಿಯಾಗುತ್ತಾರೆ” ಅನ್ನೋ ಮಾತನ್ನ ಇಸ್ರೇಲಿಗರು ಎಂದೂ ಮರೆಯೋದಿಲ್ಲ.

ಅವರು ತಮ್ಮ ಪೂರ್ವಜರ ಹತ್ಯೆಗಳನ್ನ, ತಮ್ಮ ಸಂಸ್ಕೃತಿ ಆಚಾರ ವಿಚಾರಗಳನ್ನು ಮರೆತಿದ್ದರೆ ಇಂದು ಜಗತ್ತಿನ ಭೂಪಟದಲ್ಲಿ ಇಸ್ರೇಲ್ ಆಗಲಿ ಅಥವ ಯಹೂದಿ ಜನಾಂಗವಾಗಲಿ ಇರುತ್ತಲೇ ಇರಲಿಲ್ಲ.

ಸುತ್ತಲೂ ಶತ್ರು ರಾಷ್ಟ್ರಗಳಿದ್ದರೂ ಇಸ್ರೇಲಿನ ಮೇಲೆ ಕಣ್ಣು ಹಾಕೋಕೂ ಶತ್ರು ರಾಷ್ಟ್ರಗಳು ನೂರು ಬಾರಿ ಯೋಚಿಸುತ್ತವೆ. ಇಸ್ರೇಲ್’ನ ಒಬ್ಬನನ್ನು ಶತ್ರುಗಳು ಕೊಂದರೆ ಅದರ ಬದಲಾಗಿ ಇಸ್ರೇಲ್ 50 ಶತ್ರುಗಳನ್ನ ಕೊಲ್ಲುತ್ತೆ. ಶತ್ರು ಯಾವ ರಾಷ್ಟ್ರದಲ್ಲೇ ಅಡಗಿದ್ದರೂ ಅವರು ಅಡಗಿರುವ ರಾಷ್ಟ್ರಕ್ಕೆ ಹೋಗಿ ಕೊಂದು ಬರುವ ತಾಕತ್ತು ಇಂದು ಇಸ್ರೇಲಿಗಿದೆಯೆಂದರೆ ಅದಕ್ಕೆ ಕಾರಣ ಅವರ ದೇಶಾಭಿಮಾನ.

ಇಸ್ರೇಲ್’ನ ಪಕ್ಕದ ರಾಷ್ಟ್ರವೇ ಸಿರಿಯಾ, ನಿಮಗೆಲ್ಲ ಗೊತ್ತಿರೋ ಹಾಗೆ ಸಿರಿಯಾದಲ್ಲಿಯೇ ಐಸಿಸ್ ಎಂಬ ಭಯೋತ್ಪಾದಕ ಸಂಘಟನೆ ಹುಟ್ಟಿಕೊಂಡಿದ್ದು ಹಾಗು ಜಗತ್ತಿನ ಅನೇಕ ರಾಷ್ಟ್ರಗಳ ಪ್ರಜೆಗಳನ್ನ ಸಿರಿಯಾದಲ್ಲಿ ಕೊಲ್ಲುತ್ತಿರೋದು, ಆದರೆ ಐಸಿಸ್ ಉಗ್ರರು ಇಸ್ರೇಲಿನ ಒಬ್ಬ ಪ್ರಜೆಯನ್ನಾದರೂ ಕೊಂದಿದಾರಾ? ಉಹುಂ, ಇಲ್ಲ ಇಸ್ರೇಲಿನ ಮೇಲೆ ಕಣ್ಣು ಹಾಕೋ ಆ ತಾಕತ್ತು ಐಸಿಸ್ ನಲ್ಲಿಲ್ಲ, ಐಸಿಸ್’ಗೆ ಇಸ್ರೇಲ್ ನ ತಾಕತ್ತು ಗೊತ್ತಿರೋದ್ರಿಂದ ಇಲ್ಲಿವರೆಗೂ ಇಸ್ರೇಲ್’ನ ತಂಟೆಗೆ ಹೋಗಿಲ್ಲ ಮುಂದೆಯೂ ಹೋಗಲ್ಲ.

ಇಸ್ರೇಲ್ ನ ಬಗ್ಗೆ ಕೆಲ ರೋಚಕ ಕಥೆಗಳನ್ನ ನಾವು ಕೇಳಲೇಬೇಕು ಹಾಗು ಭಾರತೀಯರು ಇಸ್ರೇಲಿಗರ ಅಂಥ ಸಾಹಸಗಾಥೆಗಳನ್ನ ನಮ್ಮಲ್ಲೂ ಅನುಸರಿಸಬೇಕು.

1) ಇಸ್ರೇಲ್ ಜಗತ್ತಿನ ಪುಟ್ಟ ರಾಷ್ಟ್ರಗಳ ಸಾಲಿನಲ್ಲಿರೋ ಕೇವಲ 85 ಲಕ್ಷ ಜನಸಂಖ್ಯೆ ಇರೋ ಚಿಕ್ಕ ರಾಷ್ಟ್ರ

2) ಜಗತ್ತಿನಲ್ಲಿ ಒಂದೇ ಒಂದು ಯಹೂದಿ ರಾಷ್ಟ್ರವಿದೆ, ಅದೇ ಇಸ್ರೇಲ್

3) ನಮ್ಮಲ್ಲಿ ಸಂಸ್ಕೃತ ಭಾಷೆ ಹೇಗೋ ಹಾಗೆಯೇ ಇಸ್ರೇಲ್’ನ ಭಾಷೆ #ಹಿಬ್ರೂ ಆಗಿತ್ತು, ಮಧ್ಯಕಾಲೀನ ದಲ್ಲಿ ಅಳಿದು ಹೋಗಿದ್ದ ಹಿಬ್ರೂ ಭಾಷೆಯನ್ನ ಇಸ್ರೇಲ್ ದೇಶ ಆಡಳಿತ ಭಾಷೆಯನ್ನಾಗಿ ಮಾಡಿ ಕಳೆದುಹೋಗಿದ್ದ ಭಾಷೆಗೆ ಮತ್ತೆ ಮರುಜೀವ ನೀಡಿತು.

4) ಇಸ್ರೇಲಿನ ಪ್ರತಿಯೊಬ್ಬ ಪ್ರಜೆಯೂ ಇಸ್ರೇಲ್ ಸೈನ್ಯದಲ್ಲಿ ಕಡ್ಡಾಯವಾಗಿ ಸೇವೆ ಸಲ್ಲಿಸಲೇಬೇಕು. (ಗಂಡಿಗೆ ಮೂರು ವರ್ಷ ಹಾಗು ಹೆಣ್ಣಿಗೆ ಎರಡು ವರ್ಷ ಸೈನ್ಯ ತರಬೇತಿ ಕಡ್ಡಾಯ)

5) ಇಸ್ರೇಲ್ ಸೈನ್ಯದಲ್ಲಿ 50% ಗಿಂತ ಹೆಚ್ಚು ಆಫೀಸರ್’ಗಳು ಮಹಿಳೆಯರೇ.

6) ಇಸ್ರೇಲ್’ನ ವಾಯುಸೇನೆ ಜಗತ್ತಿನ ನಾಲ್ಕನೆಯ ಸ್ಥಾನ ಪಡೆದಿದೆ.

7) ಕೃಷಿಯಲ್ಲಿ ಇಸ್ರೇಲ್ ಮೂರನೆಯ ಸ್ಥಾನದಲ್ಲಿದೆ.

8) ಇಸ್ರೇಲ್’ನಲ್ಲಿ ಮೂರುವರೆ ಸಾವಿರಕ್ಕೂ ಹೆಚ್ಚು ಟೆಕ್ನಾಲಜಿ ಕಂಪನಿಗಳಿವೆ, ಮೊಟೋರೋಲಾ ಪೋನ್ ಮೊಟ್ಟ ಮೊದಲಿಗೆ ಆವಿಷ್ಕಾರಗೊಂಡಿದ್ದೇ ಇಸ್ರೇಲ್’ನಲ್ಲಿ. ಟೆಕ್ನಾಲಜಿಯಲ್ಲಿ ಇಸ್ರೇಲ್ ಜಗತ್ತಿನಲ್ಲಿಯೇ ಎರಡನೇ ಸ್ಥಾನದಲ್ಲಿದೆ.

9) ಪೂರ್ಣ ಪ್ರಮಾಣದ Anti Ballistic Missile Defense System ಹೊಂದಿರೋ ದೇಶ ಇಸ್ರೇಲ್ ಮಾತ್ರ, ಯಾವ ಶತ್ರು ದೇಶವೂ ಇಸ್ರೇಲ್’ನ ಮೇಲೆ ದಾಳಿ ಮಾಡೋಕೆ ರಾಕೆಟ್ ಬಿಟ್ಟರೂ anti ballistic technology ಯ ಕಾರಣ ಆ ರಾಕೆಟ್ ಗಳು ಮಧ್ಯದಲ್ಲಿಯೇ ಟುಸ್ ಆಗ್ತವೆ.

10) ಜಗತ್ತಿನ ಅತೀ ಶಕ್ತಿಶಾಲಿ ಇಂಟೆಲಿಜೆನ್ಸ್ ಏಜೆನ್ಸಿ ಯಾವುದಾದರೂ ಇದ್ದರೆ ಅದು ಇಸ್ರೇಲಿನ #ಮೊಸ್ಸಾದ್(Mossad) ಮಾತ್ರವೇ. ಮೊಸ್ಸಾದ್’ನ್ನ God of Intelligencies ಅಂತಲೂ ಕರೀತಾರೆ.

ಇಸ್ರೇಲಿನ ಬಗ್ಗೆ ಮಾತಾಡಬೇಕೆಂದರೆ ಅಲ್ಲಿನ ಇಂಟೆಲಿಜೆನ್ಸ್ ಏಜೆನ್ಸಿ ಮೊಸ್ಸಾದ್ ನ ಬಗ್ಗೆ ತಿಳಿದುಕೊಳ್ಳಲೇಬೇಕು.

ಮೊಸ್ಸಾದ್’ನ ಅಂಡರ್ ಕವರ್ ಆಪರೇಷನ್’ನ ಬಗ್ಗೆ ತಿಳಿದುಕೊಳ್ಳಬೇಕೆಂದರೆ 1976 ರಲ್ಲಿ ಪ್ಯಾಲೆಸ್ತೇನಿನ ಉಗ್ರಗಾಮಿಗಳು #ಏರ್_ಫ್ರಾನ್ಸ್ ವಿಮಾನವನ್ನು ಹೈಜಾಕ್ ಮಾಡಿ ವಿಮಾನದಲ್ಲಿದ್ದ 250 ಪ್ರಯಾಣಿಕರ ಪೈಕಿ ಉಳಿದವರನ್ನೆಲ್ಲ ವಾಪಸ್ ಕಳಿಸಿ ಇಸ್ರೇಲಿನ ಯಹೂದಿಗಳಿದ್ದ 103 ಜನರನ್ನ ಮಾತ್ರ ಒತ್ತೆಯಾಳಾಗಿಟ್ಟುಕೊಂಡು ಇಸ್ರೇಲ್ ಜೈಲಿನಲ್ಲಿದ್ದ ಪ್ಯಾಲೆಸ್ತಿನ್’ನ 43 ಭಯೋತ್ಪಾದಕರ ಬಿಡುಗಡೆಗೆ ಬೇಡಿಕೆಯಿಟ್ಟಿದ್ದರು.

ಏರ್ ಫ್ರಾನ್ಸ್ ವಿಮಾನವನ್ನು ಇಸ್ರೇಲ್’ನಿಂದ ಸುಮಾರು 2600 ಮೈಲು ಅಂದರೆ ಬರೋಬ್ಬರಿ 4200KM ದೂರದ ಉಗಾಂಡಾಕ್ಕೆ ಹೈಜಾಕ್ ಮಾಡಿದ್ದ ಭಯೋತ್ಪಾದಕರನ್ನ ಉಗಾಂಡಾಕ್ಕೆ ಹೊಕ್ಕಿ ತನ್ನ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ತಂದ ಇಸ್ರೇಲ್ ಆರ್ಮಿಯ ಆಗ ಹಿಂದೆ ನಿಂತದ್ದೇ ಇಸ್ರೇಲಿನ ಇಂಟೆಲಿಜೆನ್ಸ್ ಏಜೆನ್ಸಿ ಮೊಸ್ಸಾದ್.

ಆ ಆಪರೇಷನ್’ಗೆ ಕೊಟ್ಟ ಹೆಸರೇ #ಆಪರೇಷನ್ಥಂಡರಬೋಲ್ಟ್ ಅಥವ #ಆಪರೇಷನ್ಎಂಟೆಬ್ಬೆ

ಉಗಾಂಡಾ ಇಸ್ರೇಲ್’ನಿಂದ 2600 ಮೈಲು(ಅಂದರೆ 4200 ಕಿಲೋಮೀಟರ್) ದೂರವಿರೋ ಸ್ಥಳವಾಗಿತ್ತು. ಅಷ್ಟು ದೂರ ಹೋಗಿ ತನ್ನ ಪ್ರಜೆಗಳ ರಕ್ಷಣೆ ಮಾಡುವುದು ಅಸಾಧ್ಯದ ಮಾತಾಗಿತ್ತು. ಕಾರಣ ಇಸ್ರೇಲ್’ನಿಂದ ಉಗಾಂಡಾಗೆ ತೆರಳಬೇಕಾದರೆ ಶತ್ರುರಾಷ್ಟ್ರಗಳ ಮೂಲಕವೇ ಹಾದುಹೋಗಬೇಕಾಗುವುದು. ಅಷ್ಟು ದೂರದ ಪ್ರಯಾಣಕ್ಕೆ ಪ್ಲೇನ್’ಗೆ ಇಂಧನ ತುಂಬಿಸೋಕೆ ಮಾರ್ಗ ಮಧ್ಯೆ ಲ್ಯಾಂಡಿಂಗ್ ಮಾಡಲೇಬೇಕಾದ ಅನಿವಾರ್ಯತೆ ಇಸ್ರೇಲ್’ಗಿತ್ತು. ಆದರೆ ಯಾವ ರಾಷ್ಟ್ರವೂ ಇದಕ್ಕೆ ತಯಾರಾಗ್ತಿರಲಿಲ್ಲ & infact ಇಸ್ರೇಲ್ ಕೂಡ ಈ ಆಪರೇಷನ್ ವಿಷ್ಯವನ್ನ ಜಗತ್ತಿಗೆ ತಿಳಿಯದ ಹಾಗೆಯೇ ನಡೆಸಬೇಕಾಗಿತ್ತು.

ಇಸ್ರೇಲೀ ಸೈನ್ಯ ನಾಲ್ಕು ವಿಮಾನಗಳ ಮೂಲಕ ಉಗಾಂಡಾದ #ಎಂಟೆಬ್ಬೆ ಏರಪೋರ್ಟ್’ಗೆ ಹೊರಟೇ ನಿಂತವು. ನಾಲ್ಕು ಪ್ಲೇನ್’ಗಳ್ಯಾಕೆ?

ಒಂದ್ರಲ್ಲಿ ಇಸ್ರೇಲಿನ ಸೈನಿಕರು, ಎರಡನೆ ಪ್ಲೇನ್’ನಲ್ಲಿ ಉಳಿದ ಪ್ಲೇನ್’ಗಳಿಗೆ ಬೇಕಾದ ಇಂಧನ, ಮೂರನೆ ಪ್ಲೇನ್’ನಲ್ಲಿ ವೈದ್ಯಕೀಯ ತಂಡ ಹಾಗು ನಾಲ್ಕನೇ ಪ್ಲೇನ್’ನಲ್ಲಿ ಕಪ್ಪು ಬಣ್ಣದ ಮರ್ಸಿಡಿಸ್ ಬೆಂಜ್ ಕಾರು ಹಾಗು ಒಂದೆರಡು ಜೀಪ್.

ನಾಲ್ಕನೆಯ ಪ್ಲೇನ್’ನಲ್ಲಿ ಕಪ್ಪು ಮರ್ಸಿಡಿಸ್ ಬೆಂಜ್ ಕಾರ್ ಯಾಕೆ ಅಂತ ಯೋಚಿಸ್ತಿದೀರಾ ತಾನೆ? ಪ್ಲೇನ್ ಹೈಜಾಕ್ ಮಾಡಿದ್ದು ಪ್ಯಾಲೇಸ್ತೇನಿನ ಉಗ್ರರು, ಹೈಜಾಕ್ ಮಾಡಿ ಪ್ರಯಾಣಿಕರನ್ನು ಒತ್ತೆಯಾಳಾಗಿಟ್ಟಿದ್ದು ಉಗಾಂಡಾದ ಎಂಟೆಬ್ಬೆ ಏರಪೋರ್ಟ್’ನಲ್ಲಿ, ಈ ಕೃತ್ಯಕ್ಕೆ ಉಗಾಂಡಾದ ಆಗಿನ ಕ್ರೂರ ಅಧ್ಯಕ್ಷ #ಇದಿ_ಅಮೀನ್ ಸಾಥ್ ನೀಡಿದ್ದ. ಆತ ಪ್ಯಾಲೇಸ್ತೇನಿ ಉಗ್ರರನ್ನ ಭೇಟಿಯಾಗೋಕೆ ಎಂಟೆಬ್ಬೆ ಏರ್ಪೋರ್ಟ್’ಗೆ ಬಂದಾಗ ಆತ ಕಪ್ಪು ಬಣ್ಣದ ಮರ್ಸಿಡಿಸ್ ಬೆಂಜ್ ನಲ್ಲಿ ಬರುತ್ತಿದ್ದನಂತ ಬಿಡುಗಡೆಯಾದ ಬೇರೆ ರಾಷ್ಟ್ರದ ಪ್ರಯಾಣಿಕರಿಂದ ಮಾಹಿತಿ ಪಡೆದುಕೊಂಡ ಇಸ್ರೇಲ್’ನ ಸೈನ್ಯ ಉಗಾಂಡಾದ ಅಧ್ಯಕ್ಷನ ರೀತಿಯಲ್ಲೇ ಥೇಟ್ ಈತ ಉಗಾಂಡಾ ಅಧ್ಯಕ್ಷನೇ ಅನ್ನೋ ರೀತಿಯಲ್ಲಿ ತನ್ನ ಸೈನಿಕನೊಬ್ಬನನ್ನ ರೆಡಿ ಮಾಡಿದ್ದರು.

ಅದು ಜೂನ್ 4, 1976, ಉಗ್ರರು ನೀಡಿದ್ದ ಡೆಡಲೈನ್ ಮುಗಿಯೋ ಹೊತ್ತಾಗಿತ್ತು. ಅದೇ ಸಮಯದಲ್ಲಿ ಎಂಟೆಬ್ಬೆ ಏರಪೋರ್ಟ್ ಮೇಲೆ ಗುಂಡಿನ ಸುರಿಮಳೆ, ಗ್ರೇನೇಡ್’ಗಳ ದಾಳಿಯಿಂದ ಪ್ಯಾಲೆಸ್ತೇನಿ ಉಗ್ರರು ಹಾಗು ಉಗಾಂಡಾ ಸೈನಿಕರು ಕಕ್ಕಾಬಿಕ್ಕಿಯಾಗಿದ್ದರು. ನೋಡು ನೋಡುತ್ತಲೇ ಏರಪೋರ್ಟ್ ಒಳಗೆ ನುಗ್ಗಿದ ಇಸ್ರೇಲಿ ಸೈನಿಕರು ಒತ್ತೆಯಾಳಾಗಿದ್ದ ತನ್ನೆಲ್ಲ 103 ಪ್ರಯಾಣಿಕರನ್ನ ಸುರಕ್ಷಿತವಾಗಿ ವಾಪಸ್ ತನ್ನ ತಾಯ್ನಾಡಿಗೆ ಕರೆದುಕೊಂಡು ಹೋಗುವಲ್ಲಿ ಯಶಸ್ವಿಯಾಗಿತ್ತು. ಈ ಆಪರೇಷನ್ ಮುಂದಾಳತ್ವವಹಿಸಿದ್ದು ಇಸ್ರೇಲ್ ಡಿಫೆನ್ಸ್ ಫೋರ್ಸ್'(IDF)ನ ಅಧಿಕಾರಿ #ಯೋನಾಥನ್_ನೇತನ್ಯಾಹು.

ಅದೃಷ್ಟವಶಾತ್ ಇಸ್ರೇಲಿನ ಎಲ್ಲ ಪ್ರಯಾಣಿಕರೂ ತಾಯ್ನಾಡಿಗೆ ವಾಪಸ್ಸಾದರು, ಆಪರೇಷನ್ ಎಂಟೆಬ್ಬೆ ಯಶಸ್ವಿಯಾಗಿತ್ತು ಆದರೆ ಒಬ್ಬ ಇಸ್ರೇಲಿ ಆಫೀಸರ್ ಮಾತ್ರ ಉಗಾಂಡಾದ ಎಂಟೆಬ್ಬೆ ಏರಪೋರ್ಟನಲ್ಲಿ ಶತ್ರುಗಳ ಗುಂಡಿಗೆ ಎದೆಯೊಡ್ಡಿ ವೀರಮರಣವನ್ನಪ್ಪಿದ್ದ.

ಆತನೇ ಇಡೀ ಕಾರ್ಯಾಚರಣೆಯ ಜವಾಬ್ದಾರಿ ಹೊತ್ತಿದ್ದ #ಯೋನಾಥನ_ನೇತನ್ಯಾಹು

ಈಗಿನ ಇಸ್ರೇಲಿನ ಪ್ರಧಾನಿ #ಬೆಂಜಮಿನ್_ನೇತನ್ಯಾಹು ಯಾರು ಗೊತ್ತೆ? ಈ ಬೆಂಜಮಿನ್ ನೇತನ್ಯಾಹು ಅಂದು ಆಪರೇಷನ್ ಎಂಟೆಬ್ಬೆಯ ಸಾರಥ್ಯ ವಹಿಸಿದ್ದ ಯೋನಾಥನ್ ನೇತನ್ಯಾಹುವಿನ ತಮ್ಮ.

ಜಗತ್ತಿನ ಇತಿಹಾಸದಲ್ಲಿ ಅಂದು ಇಸ್ರೇಲ್ ನಡೆಸಿದ್ದ ಆಪರೇಷನ್ ಎಂಟೆಬ್ಬೆ ಇಡೀ ವಿಶ್ವದಲ್ಲೇ ಯಾವ ರಾಷ್ಟ್ರವೂ ಹಿಂದೆಯೂ ಮಾಡಿರಲಿಲ್ಲ ಬಹುಷಃ ಮಯಂದೆಯೂ ಯಾವ ರಾಷ್ಟ್ರವೂ ಮಾಡಲಾರದೇನೋ.

ತನ್ನ ರಾಷ್ಟ್ರದ ಒಬ್ಬ ಪ್ರಜೆಗೆ ಬೇರೆ ಯಾವ ರಾಷ್ಟ್ರದ ಭಯೋತ್ಪಾದಕರಿಂದ ಕಿಂಚಿತ್ ತೊಂದರೆಯಾದರೂ ಸಹಿಸದ ಇಸ್ರೇಲ್ ಶತ್ರುಗಳ 50 ತಲೆ ಕಡಿಯುತ್ತೆ.

ಇಡೀ ಜಗತ್ತಿನಲ್ಲಿ ಹೋಲೋಕಾಸ್ಟ್(ಸಾಮೂಹಿಕ ಮಾರಹೋಣ) ಯಾವ ಜನಾಂಗದ ಮೇಲಾದರೂ ಆಗಿದ್ದರೆ ಅದು ಯಹೂದಿಗಳ ಮೇಲೆ ಮಾತ್ರ, ಯಹೂದಿಗಳೆಂದರೆ ಉರ್ಕೊಂಡು ಸಾಯ್ತಿದ್ದ ಕ್ರಿಶ್ಚಿಯನ್ನರು ಈಗ ಸ್ವಲ್ಪ ಬದಲಾಗಿದ್ದಾರೆ ಆದರೆ ಮುಸಲ್ಮಾನರು ಮಾತ್ರ ಇಸ್ರೇಲ್ ಅಂದ್ರೆ ಇನ್ನೂ ಕೆಂಡ ಕಾರುತ್ತಾರೆ.

ಅದಕ್ಕೆ ತಾಜಾ ಉದಾಹರಣೆಯೆಂದರೆ ನಮ್ಮ ಕಾಶ್ಮೀರಕ್ಕಾಗಿ ಹೇಗೆ ಪಾಕಿಸ್ತಾನ ಸದಾ ಕ್ಯಾತೆ ತೆಗೆದು ಯುದ್ಧಕ್ಕೆ ಬರುತ್ತೋ ಹಾಗೆಯೇ ಇಸ್ರೇಲ್ ಹಾಗು ಪ್ಯಾಲೇಸ್ತಿನ್’ನ ಮಧ್ಯೆ ಇರೋ #ಗಾಜಾ ಎಂಬ ಪ್ರದೇಶಕ್ಕಾಗಿ ಪ್ಯಾಲೇಸ್ತೀನ್’ನ ಉಗ್ರ ಸಂಘಟನೆ #ಹಮಾಸ್ ಇಸ್ರೇಲ್’ನ ಮೇಲೆ ಕೆಂಡ ಕಾರುತ್ತಲೇ ಇರುತ್ತೆ ಹಾಗು ಇಸ್ರೇಲನ್ನ ಸರ್ವನಾಶ ಮಾಡೇ ಮಾಡ್ತೀವಿಯಂತ ಯುದ್ಧಕ್ಕೆ ನಿಂತು ಇಸ್ರೇಲಿನ ಕೈಯಲ್ಲಿ ಸೊಂಟ ಮುರಿಸಿಕೊಳ್ಳುತ್ತಲೇ ಇರುತ್ತೆ.

ಹಮಾಸ್ ಉಗ್ರರು ಗಾಜಾದಲ್ಲಿ ನಿಂತು ಇಸ್ರೇಲಿನ ಮೇಲೆ ದಾಳಿ ನಡೆಸಲು ಮುಂದಾದಾಗ ಇಸ್ರೇಲ್ ಬಿಟ್ಟ ಕ್ಷಿಪಣಿಗಳು ಗಾಜಾ ನಗರವನ್ನು ಧ್ವಂಸ ಮಾಡಿಬಿಟ್ಟಿದ್ದವು.

ಅದೆಲ್ಲೋ ದೂರದ ಗಾಜಾ, ದೂರದ ಪ್ಯಾಲೇಸ್ತೀನ್ ನಲ್ಲಿ ಇಸ್ರೇಲಿಗರಿಂದ ಮುಸಲ್ಮಾನರು ಸತ್ತರೆ ಇಲ್ಲಿ ಭಾರತದಲ್ಲಿ ಮುಸಲ್ಮಾನರು ದಂಗೆಯೇಳ್ತಾರೆ, ಮುಂಬೈನಲ್ಲಿ ಹಿಂಸಾತ್ಮಕ ಪ್ರದರ್ಶನ ಮಾಡ್ತಾರೆ, ತಮಗೆಲ್ಲ ತಿಳಿದ ಹಾಗರ ಮುಂಬೈ ಆಜಾದ್ ಮೈದಾನದಲ್ಲಿ #Save_Gaza ಅಂತ ಪ್ರೊಟೆಸ್ಟ್ ಮಾಡ್ತಿದ್ದ ಮುಸಲ್ಮಾನರೇ ಅಲ್ವ #ಅಮರ್_ಜವಾನ್ ಮೆಮೋರಿಯಲ್’ನ್ನ ಧ್ವಂಸಗೊಳಿಸಿದ್ದು.

ನಮ್ಮೂರು ಕಲಬುರಗಿಯಲ್ಲಂತೂ save Gaza ಅಂತ ಹಣೆಗೆ ಪಟ್ಟಿ ಕಟ್ಟಿಕೊಂಡು ಇಸ್ರೇಲ್ ನ್ನ ವಿರೋಧಿಸೋಕಂತ ಮುಸಲ್ಮಾನರು ಪೆಪ್ಸಿ ಕೊಕೋಕೋಲಾ ಕಂಪನಿ ನೀಡಿದ್ದ ಫ್ರಿಡ್ಜ್’ಗಳನ್ನ ರೋಡಿಗೆ ತಂದು ಸುಟ್ಟು ಹಾಕಿದ್ದರು.

ಇಂಥ ನಾಲಾಯಕರ ವೋಟಬ್ಯಾಂಕಿಗೋಸ್ಕರವೇ ಕಾಂಗ್ರೆಸ್ 70 ವರ್ಷವಾದರೂ ಇಸ್ರೇಲಿಗೆ ಕಾಲಿಟ್ಟಿರಲಿಲ್ಲ.

ಇನ್ನು ಜಗತ್ತಿನ ಹಲವಾರು ಮುಸ್ಲಿಂ ರಾಷ್ಟ್ರಗಳಲ್ಲಿ ಇಸ್ರೇಲ್ ಪಾಸಪೋರ್ಟ್ ಕೆಲಸಕ್ಕೆ ಬರೋದೇ ಇಲ್ಲ. ಪಾಕಿಸ್ತಾನದ ಪಾಸ್ಪೋರ್ಟ್ ಮೇಲಂತು “ಈ ಪಾಸಪೋರ್ಟ್’ಗೆ ಎಲ್ಲ ರಾಷ್ಟ್ರಗಳ ಮಾನ್ಯತೆಯು ಇದೆ ಆದರೆ ಇಸ್ರೇಲ್ ಹೊರತುಪಡಿಸಿ ” ಅಂತ ಬರೆದಿರುತ್ತೆ.

ಮುಸಲ್ಮಾನ ರಾಷ್ಟ್ರಗಳು ಇಸ್ರೇಲ್ ಹಾಗು ಯಹೂದಿಗಳ ಮೇಲೆ ಕೆಂಡ ಕಾರುವ ಕಾರಣ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಸೆಕ್ಯೂಲರಿಸಮ್ಮಿಗೆ ಧಕ್ಕೆಯಾಗುತ್ತೆ, ಅರಬ್ ರಾಷ್ಟ್ರಗಳು ಮುನಿಸಿಕೊಳ್ಳುತ್ತವೆ, ಅರಬ್ ರಾಷ್ಟ್ರಗಳು ಮುನಿಸಿಕೊಂಡರೆ ಇಲ್ಲಿ ನಮ್ಮ ದೇಶದೊಳಗಿನ ಮುಸಲ್ಮಾನರು ಮುನಿಸಿಕೊಳ್ತಾರೆ, ಅವರು ಮುನಿಸಿಕೊಂಡರೆ ನಮ್ಮ ವೋಟುಗಳ ಗತಿಯೇನು ಅಂತ ಕಾಂಗ್ರೆಸ್ ಆದಿಯಾಗಿ ಯಾವ ಪಾರ್ಟಿಯ ಪ್ರಧಾನಮಂತ್ರಿಯೂ ಇಸ್ರೇಲ್’ಗೆ ಕಾಲಿಟ್ಟಿರಲಿಲ್ಲ.

2003 ರಲ್ಲಿ ಖುದ್ದು ಇಸ್ರೇಲ್ ಪ್ರಧಾನಿಯೇ ಅಟಲ್ ಬಿಹಾರಿ ವಾಜಪೇಯಿಯವರ ಕಾಲದಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು.

ಇಂದು ನಮ್ಮ ದೇಶದ ಹೆಮ್ಮೆಯ ಪ್ರಧಾನಿ ಇಸ್ರೇಲ್ ಗೆ ಹೋಗಿ ಹೊಸ ಇತಿಹಾಸವನ್ನೇ ಸೃಷ್ಟಿ ಮಾಡಿದ್ದಾರೆ.

ಪ್ರಧಾನಿ ಮೋದಿ ಇಸ್ರೇಲ್ ಬರುತ್ರಿದ್ದಾರೆಂದು ಇಸ್ರೇಲ್ ಮದುವಣಗಿತ್ತಿಯಂತೆ ಶೃಂಗಾರಗೊಂಡು ಮೋದಿಜೀಯ ಸ್ವಾಗತಕ್ಕೆ ಸಜ್ಜಾಗಿ ನಿಂತಿದೆ.

ಅಲ್ಲಿನ ಪಾರ್ಲಿಮೆಂಟಿನ ಮೇಲೆ ಇಸ್ರೇಲ್ ಧ್ವಜದ ಜೊತೆ ಜೊತೆಗೆ ಭಾರತದ ಧ್ವಜವೂ ಹಾರಾಡುತ್ತಿದೆ.

ಇಡೀ ಜಗತ್ತೇ ಯಹೂದಿಗಳಿಗೆ ಮೋಸ ಮಾಡಿ ಕೊಂದು ಅವರನ್ನ ರಾಷ್ಟ್ರದಿಂದ ಒದ್ದೋಡಿಸಿದಾಗ ಜಗತ್ತಿನಲ್ಲಿ ಅವರಿಗೆ ಆಶ್ರಯ ನೀಡಿದ್ದು ಒಂದೇ ರಾಷ್ಟ್ರ ಅದುವೇ ನನ್ನ ಭಾರತ.

ಹಾಗಾಗಿ ಪ್ರತಿಯೊಬ್ಬ ಇಸ್ರೇಲಿಯೂ ಭಾರತವನ್ನ ದಿನಂಪ್ರತಿ ನೆನೆಯುತ್ತಾನೆಂದರೆ ಅತಿಶಯೋಕ್ತಿಯೆನ್ನಿಸಬಹುದು.

ಭಾರತದ No Anti-Semitic ನೀತಿ ಹಾಗು ಇಲ್ಲಿನ ಸಂಸ್ಕೃತಿಯ ಕಾರಣವೇ ಇಸ್ರೇಲ್ 1971 ರ ಪಾಕಿಸ್ತಾನದ ವಿರುದ್ಧ ಯುದ್ದಲ್ಲಿ ಭಾರತದ ಜೊತೆಗೆ ನಿಂತು ಯುದ್ಧಕ್ಕೆ ಬೇಕಾದ ಅಮ್ಯುನಿಷನ್ ಒದಗಿಸಿ ಭಾರತ ಯುದ್ಧ ಗೆಲ್ಲುವಂತೆ ಮಾಡಿತ್ತು.

ಭಾರತದ ಸೈನಿಕರಿಗೆ ಹಾಗು ಬಾಂಗ್ಲಾದ ಮುಕ್ತಿವಾಹಿನಿ ಸಂಘಟನೆಗೆ ರೈಫಲ್’ಗಳನ್ನ ಕೊಟ್ಟು ಅದರ ತರಬೇತಿಯೂ ನೀಡಿ ಪರೋಕ್ಷವಾಗಿ ಅಥವ ಅಪರೋಕ್ಷವಾಗಿ ಬಾಂಗ್ಲಾದೇಶ ಅನ್ನೋ ರಾಷ್ಟ್ರ ಸೃಷ್ಟಿಯಾಗಲು ಭಾರತಕ್ಕೆ ಸಾಧ್ಯವಾದದ್ದೇ ಇಸ್ರೇಲಿನ ಸಹಾಯದಿಂದ.

ಮುಂದೆ 1999 ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲೂ ಕೂಡ “ನೀವು ಯುದ್ಧ ಮಾಡಿ ನಿಮಗೆ ಬೇಕಾದ ಶಸ್ತ್ರಗಳು ನಾವು ಪೂರೈಕೆ ಮಾಡ್ತೀವಿ, ಹಿಸಾಬ್ ಕಿತಾಬ್ ಆಮೇಲೆ ನೋಡೋಣ, ಮೊದಲು ನೀವು ಯುದ್ಧ ಗೆಲ್ಲಬೇಕು” ಅಂತ ಇಸ್ರೇಲ್ ಭಾರತಕ್ಕೆ ಬೆನ್ನೆಲುಬಾಗಿ ನಿಂತು ಪಾಕಿಸ್ತಾನದ ಹೆಡೆಮುರಿ ಕಟ್ಟೋದ್ರಲ್ಲಿ ಸಹಾಯ ಮಾಡಿತ್ತು.

ಪೋಕ್ರಾನ್ ಅಣು ಪರೀಕ್ಷೆ ಸಂದರ್ಭದಲ್ಲೂ ಭಾರತದ ಜೊತೆಗೆ ಯಾವ ಅಮೇರಿಕಾ ಕೂಡ ನಿಲ್ಲಲಿಲ್ಲ ಆಗ ಭಾರತದ ನೆರವಿಗೆ ಬಂದದ್ದು ಇದೇ ಇಸ್ರೇಲ್.

ಭಾರತವೆಂದರೆ ಇಸ್ರೇಲಿಗೆ ಯಾಕೆ ಅಷ್ಟು ಪ್ರೀತಿ ಅನ್ನೋದು ಅರ್ಥವಾಯಿತು ಅನಿಸುತ್ತೆ.

ಭಾರತವೂ ಕೂಡ ಇಸ್ರೇಲಿನ ರೀತಿಯಲ್ಲಿ war strategies ಗಳನ್ನ ಹಾಗು ಭಯೋತ್ಪಾದಕರ ವಿರುದ್ಧದ ಅವರ ಮನೆ ಹೊಕ್ಕಿ ದಾಳಿ ನಡೆಸುವಂತಹ ಕಾರ್ಯಶೈಲಿಯನ್ನ ತನ್ನದಾಗಿಸಿಕೊಳ್ಳಲಿ.

ಮೋದಿ ಇಸ್ರೇಲ್ ಭೇಟಿ ನೀಡಿರೋದನ್ನ ನೋಡಿದ ನಮ್ಮ ದೇಶದ ಸೆಕ್ಯೂಲರ್ ಗಳು, ಕಾಂಗ್ರೆಸ್ಸಿನ ನಾಯಕರು “ಅಯ್ಯೋ ಅಯ್ಯಯ್ಯೋ, ನಾವು ಎಪ್ಪತ್ತು ವರ್ಷ ಮಾಡಿದ ಎಲ್ಲಾ ಕೆಲಸಗಳೂ ಈ ಮೋದಿ ಹಾಳ್ಮಾಟ್ಬಿಟ್ನಲ್ಲಾ” ಅಂತ ಗೊಣಗಿಕೊಂಡು ಮೂಗುಮುರಿಯುತ್ತಿರೋದಂತೂ ಸತ್ಯ.

ಉರ್ಕೊಂಡ್ ಸಾಯ್ಲಿ!!!

(ಮೂಲ:  Vinod Hindu Nationalist⁠⁠⁠⁠ )


Click Here To Download Kannada AP2TG App From PlayStore!