ಲವ್ ಸಿಂಬಲ್ ಆಗಿ “ಈ ಸಂಕೇತವನ್ನೇ ( ❤ )” ಯಾಕೆ ಬಳಸುತ್ತಾರೆ?

ಮನುಷ್ಯನ ಹೃದಯಕ್ಕೆ, ಪ್ರೀತಿಗೆ ಸಂಕೇತವಾಗಿ ಗೀಚುವ ಹೃದಯದ ಆಕಾರಕ್ಕೆ ಸಂಬಂಧಿಸಿದಂತೆ ಎಂದಾದರೂ ಆಲೋಚಿಸಿದ್ದೀರಾ? ಪ್ರೀತಿ ಎನ್ನುವುದು ಹೃದಯಕ್ಕೆ ಸಂಬಂಧಿಸಿದ ವಿಷಯವಾದರೆ, ಅದನ್ನು ಸಿಂಬಲಿಕ್ ಆಗಿ ತಿಳಿಸಲು ವಾಸ್ತವ ಹೃದಯದ ಆಕಾರ ಅಲ್ಲದೆ ಬೇರೆ ವಿಧವಾಗಿ ತೋರಿಸುತ್ತೇವೆ. ಈ ರೀತಿ ಯಾಕೆ ತಿಳಿಸಬೇಕು ಎಂದು ಎಂದಾರರೂ ಸಂದೇಹ ಬಂದಿದೆಯೇ? ಸಿಕ್ಕು ಸಿಕ್ಕಾಗಿರುವ ಮನುಷ್ಯನ ಹೃದಯದ ಆಕಾರಕ್ಕೂ ಲವ್ ಸಿಂಬಲ್‌ಗೂ ಲಿಂಕ್ ಹೇಗೆ ಹೊಂದಿಕೆಯಾಯಿತು ಎಂದು ತಿಳಿದುಕೊಳ್ಳುವ ಪ್ರಯತ್ನವನ್ನು ಈಗ ಮಡೋಣ.

ಇದಕ್ಕೆ ಅನೇಕ ಕಾರಣಗಳನ್ನು ನೀಡುತ್ತಿದ್ದಾರೆ ಅವುಗಳಲ್ಲಿ ಒಂದೊಂದಾಗಿ ತಿಳಿದುಕೊಳ್ಳೋಣ.

ಐವಿ ಎಲೆ:
ಪೂರ್ವಕಾಲದಲ್ಲಿ ಗ್ರೀಸ್ ದೇಶದಲ್ಲಿ ಇಷ್ಟವಾದವರಿಗೆ ಈಗ ಗುಲಾಬಿ ಹೂವುಗಳನ್ನು ಕೊಟ್ಟಂತೆ, ಆಗ ಐವಿ (IVY) ಎಂಬ ಗಿಡದ ಎಲೆಗಳನ್ನು ಪ್ರೀತಿಯಿಂದ ಕೊಡುತ್ತಿದ್ದರಂತೆ. ಆ ಎಲೆ ನಾವೀಗ ಬರೆಯುತ್ತಿರುವ ಲವ್ ಸಿಂಬಲ್ ಆಕಾರದಲ್ಲಿರುತ್ತದೆ. ಹಾಗಾಗಿ ತನ್ನ ಹೃದಯದಲ್ಲಿನ ಇನ್ನರ್ ಫೀಲಿಂಗನ್ನು ಐವಿ ಎಲೆಗಳೊಂದಿಗೆ ಹೋಲಿಸುತ್ತೇವೆ ಆದಕಾರಣ…ಹೃದಯ ಎಂದ ಕೂಡಲೆ ಆ ಎಲೆಯ ಆಕಾರದ ಚಿತ್ರವನ್ನು ಬರೆಯುತ್ತಿದ್ದರಂತೆ! ಕಾಲಕ್ರಮೇಣ ಇದೇ ಎಲೆ ಲವ್ ಸಿಂಬಲ್ ಆಗಿ ಫಿಕ್ಸ್ ಆಯಿತಂತೆ!

ಸಿಲ್ಪಿಯಂ ಬೀಜಗಳ ಸಂಕೇತ:
ಗ್ರೀಕ್ ದೇಶದಲ್ಲಿನ ಸಿರಿನ್‌ನಲ್ಲಿ ಪುರಾತನ ಕಾಲದಲ್ಲಿ ಬೆಳೆದ ಬೀಜಗಳಿಗೆ ಒಂದು ವಿಶೇಷ ಆಕಾರ ಇರುತ್ತಿತ್ತಂತೆ. ಆ ಆಕಾರವನ್ನು ಕೆಲವು ನಾಣ್ಯಗಳ ಮೇಲೆ ಮುದ್ರಿಸುತ್ತಿದ್ದರಂತೆ. ಈ ಬೀಜಗಳ ಮೇಲೆ ಇರುವ ಸಂಕೇತವನ್ನೇ ಮನುಷ್ಯನ ಹೃದಯವಾಗಿ ಭಾವಿಸುತ್ತಿದ್ದರು.!

ಸ್ತ್ರೀ ಯೋನಿ & ಪೃಷ್ಠದ ಆಕಾರ:
ಪೂರ್ವಕಾಲದಲ್ಲಿ ರಸಿಕರಾದ ಗಂಡಸರು, ತಮ್ಮ ಇಷ್ಟ ಸುಖಗಳನ್ನು ಲವ್ ಸಿಂಬಲ್ ಆಗಿ ಬರೆದು ತೋರಿಸುತ್ತಿದ್ದರಂತೆ. ಅಂದರೆ ತನ್ನಲ್ಲಿನ ಶೃಂಗಾರ ವಾಂಛೆಯನ್ನು ಈ ವಿಧವಾಗಿ ತಿಳಿಸುತ್ತಿದ್ದರಂತೆ! ಪೃಷ್ಠ ಲವ್ ಆಕಾರದಲ್ಲಿರುವುದು, ಯೋನಿ ಸಹ ಲವ್ ಆಕಾರದಲ್ಲಿ ಇರುವುದರಿಂದ ಅವುಗಳ ಮೂಲಕ ಶೃಂಗಾರ ಬೇಕೆಂದು ಸಿಂಪಲ್ ಆಗಿ ಲವ್ ಸಿಂಬಲ್‌ನಿಂದ ತಿಳಿಸುತ್ತಿದ್ದರಂತೆ!

ಎರಡು ಹಂಸಗಳು ಮುದ್ದಾಡುತ್ತಿದ್ದಾಗ:
ಕೊಳದಲ್ಲಿ ಎರಡು ಅಂದವಾದ ಹಂಸಗಳು ಮುದ್ದಾಗಿ ಮುದ್ದಾಡುತ್ತಿದ್ದಾಗ ಹತ್ತಿರ ಸೇರಿ, ತಲೆಗಳನ್ನು ಕೆಳಕ್ಕೆ ಬಾಗಿಸಿ ಒಂದರ ಕಣ್ಣಲ್ಲಿ ಮತ್ತೊಂದು ನೋಡಿಕೊಳ್ಳುತ್ತಾ ತನ್ಮಯದಿಂದ ಚುಂಬಿಸಿಕೊಳ್ಳುತ್ತಿರುವಾಗ, ಹೆಣ್ಣು ಹಂಸ ನಾಚಿಕೆಯಿಂದ ತಲೆತಗ್ಗಿಸಿದರೆ, ಗಂಡು ಹಂಸ ಮುಂದೆ ಬಂದು ಚುಂಬಿಸುತ್ತದೆ. ಇವೆರಡು ಹೀಗೆ ಮುತ್ತಿಟ್ಟುಕೊಳ್ಳುವುದು ಶುದ್ಧವಾದ ಪ್ರೀತಿಯನ್ನು ವ್ಯಕ್ತಪಡಿಸುತ್ತದೆಂದು ತಿಳಿದು ಚಿತ್ರಕಾರನೊಬ್ಬ ಅವುಗಳ ಚುಂಬನ ಆಕಾರವನ್ನೇ ಪ್ರೀತಿಯ ಸಂಕೇತವಾಗಿದ್ದರೆ ಚೆನ್ನಾಗಿರುತ್ತದೆ ಎಂದುಕೊಂಡು ಲವ್ ಆಕಾರದಲ್ಲಿ ಒಂದು ಚಿತ್ರವನ್ನು ಬರೆದನಂತೆ!


Click Here To Download Kannada AP2TG App From PlayStore!