ದಿನಪತ್ರಿಕೆಗಳಲ್ಲಿರುವ 4 ಬಣ್ಣಗಳ ಚುಕ್ಕೆಗಳು… ಏತಕ್ಕೆ ಉಪಯೋಗಕ್ಕೆ ಬರುತ್ತವೆಂದು ಗೊತ್ತೆ…?

ದಿನಪತ್ರಿಕೆಗಳನ್ನು ಓದುವ ಅಭ್ಯಾಸ ನಿಮಗಿದೆಯೇ…? ಈಗ ಹೇಳಲು ಹೊರಟಿರುವುದೂ ದಿನಪತ್ರಿಕೆಯ ಕುರಿತಾಗಿ ಎಂದರೆ… ಅದರಲ್ಲಿ ಬರುವ ವಾರ್ತೆಗಳು ಹಾಗು ವಿಷಯಗಳ ಬಗ್ಗೆ ಅಲ್ಲ. ಆದರೂ…ಅದು ನಾವು ತಿಳಿದುಕೊಳ್ಳಲೇ ಬೇಕಾದ ವಿಷಯ. ಇಷ್ಟಕ್ಕೂ ಆ ವಿಷಯ ಏನಂತೀರಾ? ದಿನಪತ್ರಿಕೆಗಳಲ್ಲಿ ನಾಲಕ್ಕು ಬಣ್ಣದ ಚುಕ್ಕೆಗಳು ಅಥವಾ ಬೇರೆ ಯಾವುದಾದರೂ ಗುರುತುಗಳಿರುವುದನ್ನು ನೀವು ಗಮನಿಸಿದ್ದೀರಾ? ಕಂಡಿತ ನೋಡೇ ಇರುತ್ತೀರಿ. ಆದರೆ ಅವುಗಳ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಂಡಿರುವುದಿಲ್ಲ. ಸಾಮಾನ್ಯವಾಗಿ ಅಂತಹ ನಾಲಕ್ಕು ಬಣ್ಣದ ಚುಕ್ಕೆಗಳು ನಮಗೆ ಕಲರ್ ಪೇಜ್ ಗಳ ಮೇಲೆ ಕಂಡುಬರುತ್ತವೆ. ಆದರೆ,ಆ ನಾಲಕ್ಕು ಚುಕ್ಕೆಗಳನ್ನು ಏಕೆ ಮುದ್ರಿಸಿರುತ್ತಾರೆಂದು ನಿಮಗೆ ಗೊತ್ತೇ…? ಅದನ್ನು ಕುರಿತು ನಾವೀಗ ತಿಳಿದುಕೊಳ್ಳೊಣ.

ಚಿಕ್ಕ ಪ್ರಿಂಟರ್ಗಳಲ್ಲಿ ಯಾವುದದರೂ ಪೇಜ್ ನಲ್ಲಿ ಪ್ರಿಂಟ್ ತೆಗೆಯಬೇಕಾದರೆ, ಅಕ್ಷರಗಳ ವಿನ್ಯಾಸವನ್ನು ಆರಿಸಿಕೊಂಡಿರುತ್ತೇವೆ. ಪೇಜ್ ಸೆಟಪ್ ಮಾಡುತ್ತೇವೆ. ಇದರಲ್ಲಿ ಮಾರ್ಜಿನ್ ಗಳನ್ನು ಬಿಟ್ಟಿರುತ್ತೇವೆ. ಇದಕ್ಕನುಗುಣವಾಗಿಯೇ ಪ್ರಿಂಟರ್ ಮುದ್ರಿಸುತ್ತದೆ. ಅಕ್ಷರಗಳು ,ಚಿತ್ರಗಳು ಸ್ಪುಟವಾಗಿರಬೇಕಾದರೆ ಈ ಅಲೈನ್ ಮೆಂಟ್ ಮುಖ್ಯ. ಇದೇ ವಿಷಯ ನ್ಯೂಸ್ ಪೇಪರ್ ಪ್ರಿಂಟಿಂಗ್ ಗೂ ಅನ್ವಯಿಸುತ್ತದೆ. ಈರೀತಿಯಾಗಿ ಯಾವುದಾದರೂ ಕಲರ್ ಪುಟದಲ್ಲಿ ಟೆಕ್ಸ್ಟ್ ಇಲ್ಲವೆ ಚಿತ್ರಗಳನ್ನು ಅಲೈನ್ ಮೆಂಟ್ ಪ್ರಕಾರ ಮುದ್ರಿಸಲು ಈ ನಾಲಕ್ಕು ಚುಕ್ಕೆಗಳು ಅಥವಾ ಚಿನ್ಹೆಗಳು ಸಹಕಾರಿ.


ನಿಜ ಹೇಳಬೇಕೆಂದರೆ ಆ ನಾಲಕ್ಕು ಚುಕ್ಕೆಗಳು ನಾಲಕ್ಕು ಬಣ್ಣಗಳಲ್ಲಿರುತ್ತವೆ. ಸಿಎಂವೈಕೆ(CMYK)ಅಂದರೆ ಕ್ಯಾನ್,ಮೆಜೆಂಟಾ,ಯೆಲ್ಲೋ,ಬ್ಲಾಕ್ ಎಂದರ್ಥ. ಈ ನಾಲಕ್ಕು ಬಣ್ಣಗಳನ್ನು ಹಲವು ರೀತಿಗಳಲ್ಲಿ ಮಿಶ್ರಣ ಮಾಡುವುದರಿಂದ ಕೆಲವು ಲಕ್ಷ ಬಣ್ಣಗಳನ್ನು ಪಡೆಯಬಹುದು.ಅದಕ್ಕೇ ಈ ಬಣ್ಣಗಳನ್ನು ಪ್ರಾಥಮಿಕ ಬಣ್ಣಗಳೆಂದು ಕರೆಯುತ್ತಾರೆ. ಈರೀತಿ ಆ ನಾಲಕ್ಕು ಬಣ್ಣದ ಚುಕ್ಕೆಗಳಿರುವುದರಿಂದ ನ್ಯೂಸ್ ಪೇಪರ್ ಪ್ರಿಂಟಿಂಗ್ ಯಂತ್ರಗಳು ಅಲೈನ್ ಮೆಂಟ್ ಸರಿಯಾಗಿ ಮಾಡಿಕೊಂಡು ಟೆಕ್ಸ್ಟ್ ಹಾಗೂ ಚಿತ್ರಗಳನ್ನು ಸರಿಯಾಗಿ ಮುದ್ರಿಸುತ್ತವೆ. ಅದೇ ಅಲೈನ್ ಮೆಂಟ್ ಸರಿಯಾಗಿಲ್ಲದಿದ್ದರೆ ಟೆಕ್ಸ್ಟ್ ಮತ್ತು ಫೋಟೊಗಳು ಮಸಕಾಗಿ ಪ್ರಿಂಟಾಗುತ್ತವೆ. ಒಮ್ಮೊಮ್ಮೆ ನಾವಿಂತಹ ಬ್ಲರ್ ಆಗಿರುವ ಪುಟಗಳನ್ನು ನೋಡಿರುತ್ತೇವೆ. ಇದಕ್ಕೆ ಕಾರಣ ಸರಿಯಾಗಿ ಅಲೈನ್ ಮೆಂಟ್ ಆರದಿರುವುದೇ. ಆ ನಾಲಕ್ಕು ಬಣ್ಣದ ಚುಕ್ಕೆಗಳನ್ನು ಪ್ರಿಂಟರ್ ಗಳು ಗುರುತಿಸಿ ಸರಿಯಾದ ಬಣ್ಣಗಳನ್ನು ಬೆರೆಸಲು ಸಹ ಉಪಯೋಗಕ್ಕೆ ಬರುತ್ತವೆ. ಆದರೆ ಇಂತಹ ಬಣ್ಣದ ಚುಕ್ಕೆಗಳು ಪುಸ್ತಕಗಳಲ್ಲೂ ಇರುತ್ತವೆ. ಪುಸ್ತಕಗಳನ್ನು ಕಡಿಮೆ ಸಂಖ್ಯೆಯಲ್ಲಿ ಮುದ್ರಿಸುವದರಿಂದ ,ಹಾಗು ಬೈಂಡ್ ಮಾಡುವುದರಿಂದ ಆ ನಾಲಕ್ಕು ಚುಕ್ಕೆಗಳು ಕಟ್ ಆಗುತ್ತವೆ. ದಿನ ಪತ್ರಿಕೆಗಳ ವಿಷಯದಲ್ಲಿ ಹಾಗೆ ಮಾಡಲಾಗುವುದಿಲ್ಲ .ಆದುದರಿಂದ ಆ ನಾಲಕ್ಕು ಚುಕ್ಕೆಗಳನ್ನು ಹಾಗೆಯೇ ಬಿಡುವುದರಿಂದ ನಮಗೆ ಕಾಣಿಸುತ್ತವೆ.


Click Here To Download Kannada AP2TG App From PlayStore!

Share this post

scroll to top