ಶುಭಕಾರ್ಯಗಳಲ್ಲಿ ಹಣವನ್ನು ಉಡುಗೊರೆಯಾಗಿ ಕೊಡುವಾಗ ರೂ.1 ಸೇರಿಸಿ ಕೊಡುತ್ತಾರೆ.ಯಾಕೆಂದರೆ….?

ನಮ್ಮ ದೇಶದಲ್ಲಿ ಯಾವುದೇ ವರ್ಗದವರಾದರೂ,ಶುಭಕಾರ್ಯಗಳಿಗೆ ಅತಿಥಿಗಳಾಗಿ ಹೋದಾಗ ಉಡುಗೊರೆಗಳನ್ನು ಕೊಡುತ್ತಾರೆ. ಮುಖ್ಯವಾಗಿ ಹಿಂದೂಗಳಾದರೆ ಮದುವೆ,ಹುಟ್ಟು ಹಬ್ಬ,ಆರತಕ್ಷತೆ ಗಳಲ್ಲಿ ಉಡುಗೊರೆಗಳನ್ನು ನೀಡುವುದು ಸಹಜ. ಒಂದು ಕವರ್ ನಲ್ಲಿ ಹಣವನ್ನು ಹಾಕಿಯೂ ಸಹ ಉಡುಗೊರೆಯಾಗಿ ಕೊಡುತ್ತಾರೆ. ಈ ರೀತಿ ಹಣವನ್ನು ಕೊಡುವಾಗ ಯಾವಾಗಲೂ ರೂ.51,ರೂ101,ರೂ201,ರೂ.501,ರೂ.1001 ಈರೀತಿ ಕೊಡುತ್ತಾರೆ. ಶುಭಕಾರ್ಯಗಳಲ್ಲಿ ಅಲ್ಲದೇ ಕೆಲವರು ತಮಗೆ ಬರಬೇಕಾದ ಹಣವನ್ನು ಹಿಂಪಡೆಯವಾಗಲೂ ಸಹ ಇದೇ ರೀತಿ ಒದು ರೂಪಾಯಿಯನ್ನು ಹೆಚ್ಚಿಗೆ ಸೇರಿಸಿ ಪಡೆಯುತ್ತಾರೆ. ಇಷ್ಟಕ್ಕೂ… ಈ ರೀತಿ ರೂ.1 ಸೇರಿಸಿ ಯಾತಕ್ಕಾಗಿ ಕೊಡುತ್ತಾರೆ ಅಥವಾ ತೆಗೆದುಕೊಳ್ಳುತ್ತಾರೆಂದು ನಿಮಗೆ ಗೊತ್ತೆ? ಅದರ ಕುರಿತಾಗಿ ಈಗ ತಿಳಿದುಕೊಳ್ಳೋಣ.

ರೂ.50,ರೂ100,ರೂ200,ರೂ.500,ರೂ.1000 ಈ ಮೊತ್ತಗಳ ಕೊನೆಯಲ್ಲಿ ಸೊನ್ನೆಗಳಿವೆ. ಈರೀತಿ ಹಣವನ್ನು ಪೂರ್ಣ ಸಂಖ್ಯೆಯೊಂದಿಗೆ ಕೊಟ್ಟರೆ,ಆ ಹಣವನ್ನು ತೆಗೆದುಕೊಂಡವರಿಗೆ ತೊಂದರೆಯುಂಟಾಗುತ್ತದಂತೆ. ಆರೋಗ್ಯ,ಆರ್ಥಿಕ ಸಮಸ್ಯೆಗಳು ಎದುರಾಗುತ್ತವಂತೆ. ವಧೂ ವರರಿಗೆ ಈರೀತಿ ಪೂರ್ಣ ಸಂಖ್ಯೆಯ ಹಣವನ್ನು ನೀಡಿದರೆ ಅವರ ವೈವಾಹಿಕ ಜೀವನ ಸುಗಮವಾಗಿ ಸಾಗುವುದಿಲ್ಲವಂತೆ.

ಪೂರ್ಣ ಸಂಖ್ಯೆಗಳಲ್ಲದೆ ರೂ.51,ರೂ101… ಹೀಗೆ ನೀಡಿದಲ್ಲಿ ವಿಭಜಿಸಲು ಆಗದಲ್ಲವೇ…!ಇದರಿಂದಾಗಿ ವಧೂ ವರರು ಒಮ್ಮತದಿಂದ ಜೀವನ ಸಾಗಿಸುತ್ತಾರಂತೆ. ಅವರ ದಾಂಪತ್ಯ ಜೀವನ ಯಾವುದೇ ತೊಂದರೆಗಳು ಎದುರಾಗುವುದಿಲ್ಲವಂತೆ. ಪೂರ್ಣ ಸಂಖ್ಯೆಯ ಮೊತ್ತಕ್ಕೆ ರೂ.1 ನ್ನು ಸೇರಿಸಿ ಕೊಡುವುದರಿಂದ ಕೊಡುವವರಿಗೂ ,ತೆಗೆದುಕೊಳ್ಳುವವರಿಗೂ ಎಲ್ಲ ರೀತಿಯಿಂದಲೂ ಶುಭಕರವಂತೆ. ಆರೋಗ್ಯ,ವಿದ್ಯೆಯೊಂದಿಗೆ ಅವರ ಆರ್ಥಿಕ ಸಮಸ್ಯೆಗಳೂ ನಿವಾರಣೆಯಾಗುತ್ತವಂತೆ. ಈರೀತಿ ಹಣವನ್ನು ನೀಡುವುದರಿಂದ ಹಿರಿಯರ ಆಶಿರ್ವಾದ ಲಭಿಸುತ್ತದೆಂದು ನಂಬುತ್ತಾರೆ…ಆದುದರಿಂದಲೇ ನಮ್ಮ ಹಿರಿಯರು ಸೊನ್ನೆಗಳಿಂದ ಕೊನೆಗೊಳ್ಳುವ ರೀತಿ ಹಣವನ್ನು ಉಡುಗೊರೆಯಾಗಿ ನೀಡಬಾರದೆಂದು ಹೇಳುತ್ತಾರೆ…!

 


Click Here To Download Kannada AP2TG App From PlayStore!

Share this post

scroll to top