ಆಷಾಢ ಮಾಸದಲ್ಲಿ… ಗೋರಂಟಿ ಯಾಕೆ ಹಚ್ಚಿಕೊಳ್ಳುತ್ತಾರೆ ಗೊತ್ತಾ?

ಗೋರಂಟಿ ಹೆಸರು ಕೇಳಿದರೆ ಸಾಕು ಹೆಣ್ಣುಮಕ್ಕಳ ಮನಸ್ಸು ಉಬ್ಬಿಕೊಳ್ಳುತ್ತದೆ… ಹೌದು ಮತ್ತೆ ಅಂದವನ್ನು ಇಷ್ಟಪಡುವ ನಾರಿಯರ ಅಂಗೈಗಳನ್ನು ಇನ್ನಷ್ಟ ಅಂದವಾಗಿ ಬದಲಾಯಿಸುವ ಗೋರಂಟಿ ಅಂದ್ರೆ ಯಾರಿಗೆ ತಾನ ಇಷ್ಟವಿರಲ್ಲ…. ಈಗ ಮಾರುಕಟ್ಟೆಯಲ್ಲಿ ಅದೆಷ್ಟೋ ವಿಧದ ಮೆಹಂದಿಗಳು, ಅದೆಷ್ಟೋ ವಿಧದ ವಿನ್ಯಾಸಗಳು ಲಭ್ಯವಿವೆ. ಅಷ್ಟೇ ಅಲ್ಲದೆ ಗೋರಂಟಿ ಸೊಪ್ಪು ಕೀಳಬೇಕು, ಅರೆಯಬೇಕು, ಎಷ್ಟೇ ನುಣ್ಣಗೆ ಅರೆದರೂ ಡಿಸೈನ್‌ಗಳನ್ನು ಹಾಕಿಕೊಳ್ಳುವುದು ಸ್ವಲ್ಪ ಕಷ್ಟ. ಅದರ ಜತೆಗೆ ಸಮಯ ಸಹ ಹೆಚ್ಚಾಗಿಬೇಕು ಎಂದು ಫೀಲ್ ಆಗುವವರು ಸಹ ಆಷಾಢ ಬಂತೆಂದರೆ ಮಾರುಕಟ್ಟೆಯಲ್ಲಿ ಸಿಗುವ ವಿವಿಧ ರೀತಿಯ ಮೆಹಂದಿಗಳನ್ನು ಪಕ್ಕಕ್ಕಿಟ್ಟು ಗೋರಂಟಿ ಮೇಲೆಯೇ ಆಸಕ್ತಿ ವಹಿಸುತ್ತಾರೆ..

ಆಷಾಢ ಮಾಸದಲ್ಲಿ ಗೋರಂಟಿ ಇಟ್ಟುಕೊಳ್ಳುವುದರಿಂದ ಆರೋಗ್ಯವಾಗಿಯೂ… ಆಧ್ಯಾತ್ಮಿಕವಾಗಿಯೂ ಅದೆಷ್ಟೋ ಉಪಯೋಗಗಳಿವೆ… ಆಷಾಢದಲ್ಲಿ ಗ್ರೀಷ್ಮ ಋತು ಮುಗಿದು ವರ್ಷ ಋಗು ಆರಂಭವಾಗುತ್ತದೆ. ಗ್ರೀಷ್ಮದಲ್ಲಿ ನಮ್ಮ ದೇಹ ಉಷ್ಣದಿಂದ ಕೂಡಿರುತ್ತದೆ. ಆಷಾಢದಲ್ಲಿ ಹೊರಗಿನ ವಾತಾವರಣ ತಣ್ಣಗಾಗಿರುತ್ತದೆ. ಆ ರೀತಿ ಸಮಯದಲ್ಲಿ ನಮ್ಮ ದೇಹದಲ್ಲಿನ ಬಿಸಿ.. ಹೊರಗೆ ತಣ್ಣಗಿನ ವಾತಾವರಣಕ್ಕೆ ವಿರುದ್ಧವಾಗಿ ತಯಾರಾಗಿರುತ್ತದೆ. ಆದಕಾರಣ ಅನಾರೋಗ್ಯಗಳು ತಪ್ಪಿದ್ದಲ್ಲ. ಹಾಗಾಗಿ ಗೋರಂಟಿ ಇಟ್ಟುಕೊಳ್ಳುತ್ತಾರೆ. ಗೋರಂಟಿ ಸೊಪ್ಪಿಗೆ ದೇಹದಲ್ಲಿ ಇರುವ ಉಷ್ಣತೆಯನ್ನು ಕಡಿಮೆ ಮಾಡುವ ಶಕ್ತಿ ಇದೆ. ಅಷ್ಟೇ ಅಲ್ಲದೆ ಗೋರಂಟಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಗೋರಂಟಿ ಕಡ್ಡಾಯವಾಗಿ ಇಟ್ಟುಕೊಳ್ಳಬೇಕೆಂದು ಹಿರಿಯರು ಹೇಳುವುದಷ್ಟೇ ಅಲ್ಲ… ವೈದ್ಯರು ಸಹ ಒಳ್ಳೆಯದೆಂದು ಹೇಳುತ್ತಿದ್ದಾರೆ.

ಆಧ್ಯಾತ್ಮಿಕ ಪರವಾಗಿ ಗೋರಂಟಿ ಸೌಭಾಗ್ಯಕ್ಕೆ ಪ್ರತೀಕ… ಆಷಾಢದಲ್ಲಿ ಮಹಿಳೆಯರು ಗೋರಂಟಿ ಇಟ್ಟುಕೊಳ್ಳುವ ಮೂಲಕ ಸೌಭಾಗ್ಯವನ್ನು ಪಡೆದಂತವರಾಗುತ್ತಾರೆ ಎಂದು ಜ್ಯೋತಿಷಿಗಳು ಹೇಳುತ್ತಿದ್ದಾರೆ. ಆರೋಗ್ಯ ಪರವಾಗಿ, ಆಧ್ಯಾತ್ಮಿಕವಾಗಿ ಅದೆಷ್ಟೋ ಪ್ರಯೋಜನಗಳುಳ್ಳ ಗೋರಂಟಿಯನ್ನು ಕಡ್ಡಾಯವಾಗಿ ಇಟ್ಟುಕೊಳ್ಳಬೇಕು. ಇದರಿಂದ ಒಳ್ಳೆಯ ಆರೋಗ್ಯದ ಜತೆಗೆ ಕೈಗಳು ಕೆಂಪಗಾಗಿ ಸೌಂದರ್ಯ, ಆಕರ್ಷಣೆ ಇಮ್ಮಡಿಸುತ್ತದೆ.

ಇನ್ನೇಕೆ ತಡ ನಗರಗಳಲ್ಲಿ ಗೋರಂಟಿ ಸಿಗದಿದ್ದರೆ ಊರಿನಿಂದ ತರಿಸಿಕೊಂಡು ರುಬ್ಬಿಸಿಕೊಂಡು ಅಮ್ಮನ ಕೈಯಲ್ಲಿ ಚಂದಮಾಮ ಹಾಕಿಸಿಕೊಳ್ಳುವ ಆನಂದವನ್ನು ಮಿಸ್ ಮಾಡಿಕೊಳ್ಳಬೇಡಿ…

 


Click Here To Download Kannada AP2TG App From PlayStore!