ಏಕದಂತನ ವಾಹನ ಇಲಿ…ಅದಕ್ಕೆ ಕಾರಣ ಇಲ್ಲಿದೆ.!

ಮೂಷಿಕ ವಾಹನ ಮೋದಕ ಹಸ್ತಾ,ಚಾಮರಕರ್ಣ ವಿಲಂಬಿತ….ಎಂಬ ಹಾಡಿನ ಮೂಲಕ, ವಿನಾಯಕ ಇಲಿಯನ್ನು ತನ್ನ ವಾಹನವನ್ನಾಗಿ ಹೊಂದಿದ್ದ ಎಂದು ತಿಳಿದುಬರುತ್ತದೆ. ಆದರೆ,ಆನೆ ತೂಕದ ಏಕದಂತನಿಗೆ ಇಲಿ ಹೇಗೆ ವಾಹನವಾಯ್ತು , ಇಲಿ ಅಷ್ಟು ಭಾರವನ್ನು ಹೊರುವುದಾದರೂ ಹೇಗೆ? ಇದರ ಹಿಂದಿರುವ ರಹಸ್ಯವೇನು ಎಂದು ಹುಡುಕಿದಾಗ ಒಂದು ಕತೆ ಕೇಳಿಬಂತು. ಅದು ಸತ್ಯವೋ?ಅಸತ್ಯವೋ ? ತಿಳಿಯದು. ಆದರೂ ಅದರ ಹಿಂದೆ ಒಂದು ಲಾಜಿಕ್ ಇದೆ.  ಆ ಕತೆಯಲ್ಲಿ…

ಹಿಂದಿನ ಕಾಲದಲ್ಲಿ ಎಲ್ಲರೂ ಬೇಸಾಯಮಾಡಿ ಜೀವನ ನಡೆಸುತ್ತಿದ್ದರು. ಬೆಳೆದ ದವಸ,ಧಾನ್ಯಗಳನ್ನು ಗೋದಾಮುಗಳಲ್ಲಿ ಸಂಗ್ರಹಿಸಿಟ್ಟು ಉಪಯೋಗಿಸುತ್ತಿದ್ದರು. ಮುಂದೆ ಬರುವ ಬೆಳೆಗಾಗಿ ಕಾದು ನೋಡುತ್ತಿದ್ದರು. ಹೀಗೆ ಸಾಗುತ್ತಿತ್ತು ನಮ್ಮ ರೈತರ ಜೀವನ. ತಾವು ಬೆಳೆದ ಬೆಳೆ ಕೈಗೆ ಬರುವ ಸಮಯದಲ್ಲಿ, ಗುಂಪಾಗಿ ಬರುವ ಇಲಿಗಳು ದವಸ ಧಾನ್ಯಗಳ ಮೇಲೆ ದಾಳಿ ನಡೆಸಿ, ತಿಂದು ತೇಗುತ್ತಿದ್ದವಂತೆ. ಕೊನೆಗೆ ಬೀಜಕ್ಕಾಗಿ ತೆಗೆದಿರಿಸಿದ್ದ ಧಾನ್ಯಗಳೂ ರೈತರಿಗೆ ದೊರೆಯದೆ, ಬರಗಾಲ ಬಂದಿತು.


ಇದರಿಂದ ದಿಕ್ಕುತೋಚದಂತಾದ ಆ ಊರಿನ ಪ್ರಜೆಗಳು ಶಿವನಿಗಾಗಿ ತಪಸ್ಸು ಮಾಡತೊಡಗಿದರು. ಶಿವನಿಗೆ ಬಿಡುವಿಲ್ಲದ ಕಾರಣ ತನ್ನ ಮಗನಾದ ವಿನಾಯಕನನ್ನು ಕರೆದು ಈ ಸಮಸ್ಯೆಯನ್ನು ಬಗೆಹರಿಸುವಂತೆ ಆಜ್ಞೆ ಮಾಡಿದನಂತೆ. ತಂದೆಯ ಆಣತಿಯಂತೆ ಆ ಗ್ರಾಮದ ಪ್ರಜೆಗಳ ಮುಂದೆ ಪ್ರತ್ಯಕ್ಷನಾದ ವಿನಾಯಕ, ಅವರ ಸಮಸ್ಯೆಯ ಬಗ್ಗೆ ವಿಚಾರಿಸಿದ.ಇಲಿಗಳಿಂದ ಗ್ರಾಮಸ್ಥರಿಗೆ ಆಗುತ್ತಿರುವ ಅನ್ಯಾಯವನ್ನು ವಿವರಿಸಿದರು. ಆಗ ವಿನಾಯಕ,ನಿಮ್ಮ ಬೆಳೆಯನ್ನು ನಾಶ ಮಾಡುತ್ತಿರುವ ಇಲಿಗಳ ರಾಜನನ್ನು ನನ್ನ ವಾಹನವನ್ನಾಗಿ ಮಾಡಿಕೊಳ್ಳುತ್ತೇನೆ. ರಾಜಾಜ್ಞೆಯಿಲ್ಲದೆ ಇಲಿಗಳು ಏನೂ ಮಾಡಲಾರವು ಎಂದ ವಿನಾಯಕ ಅಂದಿನಿಂದ ಇಲಿ ರಾಜನನ್ನು ತನ್ನ ವಾಹನವನಾಗಿ ಮಾಡಿಕೊಂಡನಂತೆ.

  • ಇನ್ನಷ್ಟು ಮಾಹಿತಿ :
    ಇಲಿ ತಾಮಸ ಗುಣದ ಪ್ರತೀಕ. ಆದುದರಿಂದ ಕಾಮ ,ಕ್ರೋಧಗಳನ್ನು ತುಳಿಯುವುದು ಅಂದರೆ ಇಲಿ ಮೇಲೇ ಸವಾರಿ ಮಾಡುವುದು ಎಂದು ಅರ್ಥ.
  • ಇಲಿಯ ಮೇಲೆ ಕುಳಿತಿರುವ ವಿನಾಯಕ ಎಲ್ಲಿ ಬೇಕೆಂದರಲ್ಲಿಗೆ ಹೋಗ ಬಹುದು (ಸರ್ವಾಂತರ್ಯಾಮಿ) ಎಂಬ ಅಭಿಪ್ರಾಯವಿದೆ.
  • ವಿನಾಯಕನ ಎಂಟು ಅವತಾರಗಳಲ್ಲಿ ಐದು ಅವತಾರಗಳಿಗೆ ಇಲಿಯೇ ವಾಹನ.
  • ವಕ್ರತುಂಡ ಅವತಾರದಲ್ಲಿ ವಾಹನ-ಸಿಂಹ,
  • ವಿಕಟ ಅವತಾರದಲ್ಲಿ ವಾಹನ-ನವಿಲು.
  • ವಿಘ್ನರಾಜ ಅವತಾರದಲ್ಲಿ ವಾಹನ- ಶೇಷ.
  • ಜೈನ ಸಂಪ್ರದಾಯದಲ್ಲಿ ಗಣಪತಿಗೆ ಇಲಿ,ಆನೆ,ಆಮೆ,ಟಗರು,ನವಿಲು ವಾಹನಗಳೆಂದು ವಿವಿಧ ಸಂದರ್ಭಗಳಲ್ಲಿ ಹೇಳಲಾಗಿದೆ.

Click Here To Download Kannada AP2TG App From PlayStore!

Share this post

scroll to top