ಗ್ರಹಣ ಉಂಟಾದಾಗ ದೇವಾಲಯಗಳನ್ನು ಯಾಕೆ ಮುಚ್ಚುತ್ತಾರೆಂದು ಗೊತ್ತಾ…?

ಸಾಮಾನ್ಯವಾಗಿ ಸೂರ್ಯ ಹಾಗೂ ಚಂದ್ರ ಗ್ರಹಣಗಳು ಬರುತ್ತಲೇ ಇರುತ್ತವೆ. ಗ್ರಹಣವು ಕೆಲವು ಸಲ ಪಾಕ್ಷಿಕವಾಗಿ ಅಂದರೆ…ಸ್ವಲ್ಪ ಮಾತ್ರವೇ ಇರುತ್ತದೆ. ಕೆಲವೊಮ್ಮೆ ಸಂಪೂರ್ಣವಾಗಿರುತ್ತದೆ. ಗ್ರಹಣ ಹಿಡಿಯುವುದಕ್ಕೂ ಮೊದಲೇ ದೇವಾಲಯಗಳನ್ನು ಮುಚ್ಚುತ್ತಾರೆ. ಗ್ರಹಣ ಬಿಟ್ಟ ನಂತರ ದೇವಾಲಯಗಳನ್ನು ತೆಗೆಯುತ್ತಾರೆ. ನಂತರವೇ ಭಕ್ತರನ್ನು ಒಳಗೆ ಪ್ರವೇಶಿಸಿ ದೇವರ ದರ್ಶನ ಪಡೆಯಲು ಅನುಮತಿ ನೀಡುತ್ತಾರೆೆ. ಒಟ್ಟಿನಲ್ಲಿ ಗ್ರಹಣದ ಸಮಯದಲ್ಲಿ ದೇವಾಲಯಗಳನ್ನು ಮುಚ್ಚಲು ಇರುವ ಕಾರಣಗಳು ಏನೆಂದು ತಿಳಿಯೋಣವೇ…!

ಒಮ್ಮೆ ದೇವತೆಗಳೂ, ರಾಕ್ಷಸರೂ ಅಮೃತಕ್ಕಾಗಿ ಸಮುದ್ರ ಮಥನ ಮಾಡಿದರು. ಎಷ್ಟೋ ಕಷ್ಟಗಳು ಬಿದ್ದು, ಹಲವು ಒಳ್ಳೆಯ ಹಾಗೂ ಕೆಟ್ಟ ಸಂಘಟನೆಗಳು ನಡೆದ ನಂತರ ಅದರಿಂದ ಅನೇಕ ವಸ್ತುಗಳು ಬಂದ ನಂತರ ಕೊನೆಗೂ ಅಮೃತ ಹೊರಬರುತ್ತದೆ. ಅಮೃತವನ್ನು ಕುಡಿಯಲು ರಾಕ್ಷಸರೂ, ದೇವತೆಗಳೂ ಪೈಪೋಟಿಯಿಂದ ಜಗಳವಾಡುತ್ತಾರೆ. ಹೀಗೆ ಮಾಡುವುದು ಜಗತ್ತಿಗೆ ಒಳ್ಳೆಯದಲ್ಲವೆಂದು ತಿಳಿದ ವಿಷ್ಣು ಮೋಹಿನಿ ರೂಪದಲ್ಲಿ ಬಂದು ದೇವತೆಗಳನ್ನೂ, ರಾಕ್ಷಸರನ್ನೂ ಎದುರು ಬದುರು ಪಂಕ್ತಿಯಲ್ಲಿ ಕೂರಿಸಿ ಅಮೃತವನ್ನು ಹಂಚಲು ಸಿದ್ಧವಾಗುತ್ತಾನೆ. ಆದರೆ ಮೋಹಿನಿ ವೇಷ ಧರಿಸಿದ ವಿಷ್ಣುವು ರಾಕ್ಷಸರಿಗೆ ಮೋಸ ಮಾಡುತ್ತಾ ಕೇವಲ ದೇವತೆಗಳಿಗೆ ಮಾತ್ರ ಅಮೃತವನ್ನು ಹಂಚುತ್ತಿರುತ್ತಾನೆ. ಅದನ್ನು ಗಮನಿಸಿದ ರಾಹು ಎಂಬ ರಾಕ್ಷಸನು ದೇವತೆಗಳ ಪಂಕ್ತಿಯಲ್ಲಿ ನುಗ್ಗಿ ಅಮೃತವನ್ನು ತೆಗೆದುಕೊಳ್ಳುತ್ತಾನೆ. ಈ ವಿಷಯವನ್ನು ತಿಳಿದುಕೊಂಡ ಸೂರ್ಯ-ಚಂದ್ರರು ವಿಷ್ಣುವಿಗೆ ತಿಳಿಸುತ್ತಾರೆ.ಆಗ ವಿಷ್ಣು ರಾಹುವಿನ ತಲೆಯನ್ನು ಖಂಡಿಸುತ್ತಾನೆ. ಆದರೆ ಈಗಾಗಲೇ ಅಮೃತವನ್ನು ಕುಡಿದಿದ್ದ ರಾಹು ಸಾಯುವುದಿಲ್ಲ. ಆದರೆ ಪ್ರತ್ಯೇಕ ವ್ಯಕ್ತಿಗಳಾಗಿ ಬದಲಾಗುತ್ತವೆ. ಅವರನ್ನೇ ರಾಹು ಮತ್ತು ಕೇತು ಎಂದು ಕರೆಯಲು ಆರಂಭಿಸಿದರು.


ಇದಾದ ನಂತರ ರಾಹು, ಕೇತುಗಳಿಬ್ಬರೂ, ಸೂರ್ಯ, ಚಂದ್ರರನ್ನು ನುಂಗಲು ಯತ್ನಿಸುತ್ತಿರುತ್ತಾರೆ. ಅಂತಹ ಸಂದರ್ಭಗಳಲ್ಲೇ ಸೂರ್ಯ, ಚಂದ್ರ ಗ್ರಹಣಗಳು ಉಂಟಾಗುತ್ತವೆ. ಆ ಸಮಯದಲ್ಲಿ ದೇವತೆಗಳ ಶಕ್ತಿ ಕ್ಷೀಣಿಸುತ್ತದೆ ಎಂದು ದೇವಾಲಯಗಳಲ್ಲಿ ಇರುವ ಪ್ರತಿಮೆಗಳ ಶಕ್ತಿ ನಶಿಸದೆ ಇರಲೆಂದು ಗ್ರಹಣದ ವೇಳೆ ದೇವಾಲಯಗಳನ್ನು ಮುಚ್ಚುತ್ತಾರೆ. ಗ್ರಹಣ ಬಿಟ್ಟ ನಂತರ ದೇವಾಲಯಗಳನ್ನು ತೆರೆಯುತ್ತಾರೆ. ಗ್ರಹಣದ ಸಮಯದಲ್ಲಿ ಎಲ್ಲಾ ದೇವಾಲಯಗಳನ್ನೂ ಮುಚ್ಚಿದರೂ, ಶ್ರೀಕಾಳಹಸ್ತಿ ದೇವಾಲಯದಲ್ಲಿ ನವಗ್ರಹ ಕವಚ ಇರುವುದರಿಂದ ಗ್ರಹಣದ ಸಮಯದಲ್ಲೂ ದೈವಶಕ್ತಿ ನಶಿಸುವುದಿಲ್ಲ. ಆದ್ದರಿಂದ ಆ ದೇವಾಲಯವನ್ನು ಗ್ರಹಣ ಉಂಟಾದಾಗಲೂ ತೆರೆದಿರುತ್ತಾರೆ. ಆ ಸಮಯದಲ್ಲಿ ಪೂಜೆ ಮಾಡಿದರೆ ಕೋರಿಕೆಗಳು ನೆರವೇರುತ್ತವೆ ಎಂದು ಭಕ್ತರ ನಂಬಿಕೆ. ಆದ್ದರಿಂದಲೇ ಗ್ರಹಣ ಉಂಟಾದ ಸಮಯದಲ್ಲಿ ಶ್ರೀಕಾಳಹಸ್ತಿ ದೇವಾಲಯದಲ್ಲಿ ಪೂಜೆ ಕೈಗೊಳ್ಳುವವರ ಸಂಖ್ಯೆ ಅಧಿಕವಾಗಿರುತ್ತದೆ.

 


Click Here To Download Kannada AP2TG App From PlayStore!