ಜಂಟಿ ಬಾಳೆಹಣ್ಣು ತಿನ್ನಬಾರದೇ…? ಒಂದು ವೇಳೆ ತಿಂದರೆ ಏನಾಗುತ್ತದೆ…?

ನಾವು ಬಾಳೆಹಣ್ಣು ಕೊಳ್ಳಲು ಹೋದಾಗ ಬಾಳೆಹಣ್ಣು ವ್ಯಾಪಾರಿ ಬಾಳೆಗೊನೆಯಿಂದ ಹಣ್ಣು ಕೊಯ್ಯುತ್ತಿದ್ದಾಗ ನಮ್ಮ ಕಣ್ಣು ಅದರ ಮೇಲೇ ಇರುತ್ತದೆ. ಯಾಕೆಂದರೆ ಎಲ್ಲಾದರೂ ಒಂದಕ್ಕೊಂಡು ಅಂಟಿಕೊಂಡ ಅವಳಿ ಬಾಳೆಹಣ್ಣು ಏನಾದರೂ ಇದೆಯೇ ಎಂದು ನೋಡುತ್ತೇವೆ. ಒಂದು ವೇಳೆ ಇದ್ದರೆ ಆ ಅವಳಿ ಹಣ್ಣು ಬೇಡ ಎಂದು ಹೇಳಿ ತೆಗೆಯುತ್ತೇವೆ.

ಕಾರಣ? ಈ ರೀತಿ ಅವಳಿ ಬಾಳೆಹಣ್ಣನ್ನು ಮಕ್ಕಳು ತಿನ್ನಬಾರದು… ದೊಡ್ಡವರು ತಿಂದರೆ ಅವಳಿ ಮಕ್ಕಳು ಹುಟ್ಟುತ್ತಾರೆ…. ಈ ರೀತಿಯ ಬಾಳೆಹಣ್ಣನ್ನು ದೇವರಿಗೂ ಇಡಬಾರದು… ಈ ರೀತಿಯ ನಂಬಿಕೆಗಳು ನಮ್ಮಲ್ಲಿವೆ. ಹಾಗಾಗಿ ಅವಳಿ ಬಾಳೆಹಣ್ಣನ್ನು ತೆಗೆದುಕೊಳ್ಳಲು ಯಾರೂ ಇಷ್ಟಪಡಲ್ಲ. ಆದರೆ ಬಹಳಷ್ಟು ಸಲ ನಮಗೆ ಗೊತ್ತಿಲ್ಲದೆ ಈ ಅವಳಿ ಬಾಳೆಹಣ್ಣು ಬರುತ್ತಿರುತ್ತದೆ. ಅವುಗಳನ್ನು ಮಕ್ಕಳಿಗೆ ಇಡದೆ, ದೇವರಿಗೆ ಇಡದೆ ದೊಡ್ಡವರೇ ತಿನ್ನುತ್ತಿರುತ್ತಾರೆ.

ಇಷ್ಟಕ್ಕೂ ಜಂಟಿ ಬಾಳೆಹಣ್ಣನ್ನು ಮಕ್ಕಳಿಗೆ ಇಡುವ ಸಂಗತಿ ಪಕ್ಕಕ್ಕಿಟ್ಟರೆ, ಈ ರೀತಿಯ ಅವಳಿ ಬಾಳೆಹಣ್ಣು ದೇವರಿಗೆ ಇಡಬಾರದೇ? ಈ ಪ್ರಶ್ನೆಗೆ ಪಂಡಿತರು ಈ ರೀತಿ ಉತ್ತರ ಕೊಡುತ್ತಾರೆ. “ಬಾಳೆಗಿಡ ಎಂದರೆ ಬೇರೆ ಯಾರೋ ಅಲ್ಲ…ಸಾಕ್ಷಾತ್ ದೇವ ನರ್ತಕಿ ರಂಭೆಯ ಅವತಾರ. ಶ್ರೀಮಹಾವಿಷ್ಣುವಿನ ಬಳಿ ರಂಭೆ ತಾನೇ ಸೌಂದರ್ಯವತಿ ಎಂದು ಅಹಂಕಾರದಿಂದ ನಡೆದುಕೊಂಡ ಕಾರಣ ಆಕೆಗೆ ಭೂಲೋಕದಲ್ಲಿ ಬಾಳೆಗಿಡವಾಗಿ ಜನಿಸೆಂದು ಮಹಾವಿಷ್ಣು ಶಪಿಸಿದ.”

ಆದರೆ ಆಕೆ ತನ್ನ ತಪ್ಪು ತಿಳಿದುಕೊಂಡು ಬೇಡಿಕೊಂಡ ಕಾರಣ ದೇವರಿಗೆ ನೈವೇದ್ಯವಾಗಿ ಇಡುವ ಅರ್ಹತೆಯನ್ನು ವಿಷ್ಣು ಪ್ರಸಾದಿಸಿದ. ಅಷ್ಟು ಪವಿತ್ರವಾದ ಹಣ್ಣಿನಲ್ಲಿ ನಾವು ದೋಷಗಳನ್ನು ಹುಡುಕಬೇಕಾದ ಅಗತ್ಯವಿಲ್ಲ. ಅವಳಿ ಬಾಳೆಹಣ್ಣನ್ನು ಯಾವುದೇ ಅಭ್ಯಂತರವಿಲ್ಲದೆ ದೇವರಿಗೆ ಅರ್ಪಿಸಬಹುದು. ಆದರೆ ತಾಂಬೂಲದಲ್ಲಿ ಮಾತ್ರ ಜಂಟಿ ಬಾಳೆಹಣ್ಣು ಇಡಬಾರದು.

ಯಾಕೆಂದರೆ ಅವಳಿ ಬಾಳೆಹಣ್ಣಿನಲ್ಲಿ ಎರಡು ಹಣ್ಣು ಇದ್ದರೂ ಅದು ಒಂದು ಹಣ್ಣಿನ ಲೆಕ್ಕದಲ್ಲೇ ಬರುತ್ತದೆ. ತಾಂಬೂಲದಲ್ಲಿ ಒಂದೇ ಒಂದು ಹಣ್ಣು ಇಡುವಂತಿಲ್ಲವಲ್ಲ…ಹಾಗಾಗಿ ತಾಂಬೂಲದಲ್ಲಿ ಈ ರೀತಿಯ ಜಂಟಿ ಬಾಳೆಹಣ್ಣು ಇಟ್ಟರೆ ನೋಡುವುದಕ್ಕೆ ಚೆನ್ನಾಗಿರಲ್ಲ. ಹಾಗಾಗಿ ತಾಂಬೂಲದಲ್ಲಿ ಅವಳಿ ಬಾಳೆಹಣ್ಣು ಕೊಡಬಾರದು.

 

ಮನಸಿನಲ್ಲಿ ನಿಮಗಿಷ್ಟವಾದ ನಂಬರನ್ನು ಊಹಿಸಿಕೊಳ್ಳಿ… ಆ ನಂಬರನ್ನು ನಾನು ಕರೆಕ್ಟಾಗಿ ಹೇಳುತ್ತೇನೆ.

ಬಾಲ್ಯದಲ್ಲಿ ನಾವೆಲ್ಲರೂ ಶಾಲೆಯಲ್ಲಿ ತಮಾಷೆಗಾಗಿ ಒಂದು ಆಟವಾಡುತ್ತಿದ್ದೆವು. ನಿಮಗೆ ನೆನಪಿದೆಯೋ ಇಲ್ಲವೋ…ಒಂದು ಸಣ್ಣ ಲಾಜಿಕ್ ನಿಂದ ನಿಮ್ಮ ಮನಸಿನಲ್ಲಿ ಊಹಿಸಿಕೋಂಡ ನಂಬರನ್ನು ಸರಿಯಾಗಿ ಹೇಳಬಹುದು. ಮೊದಲಿಗೆ ನೀವು ಇದನ್ನು ನಿಮ್ಮ ಮೇಲೆ ಪ್ರಯೋಗಿಸಿಕೊಳ್ಳಿ. ನಂತರ ಅದರ ಹಿಂದೆ ಅಡಗಿರುವ ಲಾಜಿಕ್ ತಿಳಿಸುತ್ತೇನೆ. ಬಹಳಷ್ಟು ಜನರಿಗೆ ಇದು ತಿಳಿದೇ ಇರುತ್ತದೆ ಆದರೂ ತಮಾಷೆಗಾಗಿ ಮತ್ತೊಮ್ಮೆ ಪ್ರಯತ್ನಿಸೋಣ. ಈ ಆಟವನ್ನು ಯಾರೊಂದಿಗೆ ಆಡಿದ್ದಿರೆಂದು ನೆನಪಿಸಿಕೊಂಡು ಸಾಧ್ಯವಾದರೆ ಅವರನ್ನು ಮಾತನಾಡಿಸಿ. ಬಾಲ್ಯದ ನೆನಪುಗಳನ್ನು ಮೆಲಕು ಹಾಕಿ ಆನಂದಿಸಿ.

  •  0 ಯಿಂದ ಮೊದಲ್ಗೊಂಡು ಯಾವುದಾದರೂ ಒಂದು ಸಂಖ್ಯೆಯನ್ನು ನಿಮ್ಮ ಮನಸಿನಲ್ಲಿ ಇಟ್ಟುಕೊಳ್ಳಿ.
  • ಈಗ ಅದನ್ನು ದ್ವಿಗುಣ ಗೊಳಿಸಿ(ಡಬಲ್ ಮಾಡಿ).
  • ಅದಕ್ಕೆ ನಾನು ನಿಮಗೆ ಬಹುಮಾನವನ್ನಾಗಿ ನೀಡುವ 10 ನ್ನು ಕೂಡಿಸಿ.
  • ಈಗ ಬಂದ ಮೊತ್ತವನ್ನು ಅರ್ಧಮಾಡಿ. ಬಂದ ಮೊತ್ತದಲ್ಲಿ ನಿಮ್ಮ ಸಂಖ್ಯೆಯನ್ನು ನೀವು ತೆಗೆದುಕೊಳ್ಳಿ.
  • ಈಗ ಉಳಿದ್ದು ಎಷ್ಟೆಂದು ಗೊತ್ತಾ.???? ಉತ್ತರ ‘5’

ವಿವರಣೆ :
ನೀವು ನಿಮ್ಮ ಮನಸಿನಲ್ಲಿ ಊಹಿಸಿಕೊಂಡ ಸಂಖ್ಯೆ ‘2’ ಅಂದುಕೊಳ್ಳೋಣ.ಅದನ್ನು ಡಬಲ್ ಮಾಡಿದರೆ…4 ಆಗುತ್ತದೆ. ನಾನು ಬಹುಮಾನವಾಗಿ ನೀಡಿದ 10 ನ್ನು ಕೂಡಿದರೆ 14 ಆಗುತ್ತದೆ. ಈಗ ಈ ಮೊತ್ತವನ್ನು ಅರ್ಧ ಮಾಡಿದರೆ ‘7’ ಬರುತ್ತದೆ. ಇದರಲ್ಲಿ ನೀವು ಊಹಿಸಿಕೊಂಡ ‘2’ ನ್ನು ಕಳೆದರೆ…5. ಹಾಗಾದರೆ, ನನ್ನ ಉತ್ತರ ಸರಿಯಲ್ಲವೇ?

ಲಾಜಿಕ್ :
ಇಲ್ಲಿ ನೀವು ನಿಮ್ಮ ಮನಸಿನಲ್ಲಿ ಇಟ್ಟುಕೊಂಡ ಸಂಖ್ಯೆಯೊಂದಿಗೆ ಯಾವುದೇ ಸಂಬಂಧವಿಲ್ಲ. ಏಕೆಂದರೆನೀವು ಅಂದುಕೊಂಡ ಸಂಖ್ಯೆಯನ್ನು ಕೊನೆಗೆ ಕಳೆಯಿರಿ ಎಂದು ಹೇಳಿದಾಗಲೇ ಆ ಸಂಖ್ಯೆ ಹೋಗಿರುತ್ತದೆ. ನೀವು ಎಷ್ಟೇ ಮನಸಿನಲ್ಲಿ ಇಟ್ಟುಕೊಂಡರೂ, ನಾನು ಬಹುಮಾನವಾಗಿ ನೀಡಿದ ಸಂಖ್ಯೆಯ ಅರ್ಧದಷ್ಟು ಮಾತ್ರ ಉಳಿದಿರುತ್ತದೆ. ಆದನ್ನೇ ನಾನು ಹೇಳುವ ಉತ್ತರವಾಗಿರುತ್ತದೆ.
( ನಾನು 10 ನ್ನು ಬಹುಮಾನವನ್ನಾಗಿ ನೀಡಿದರೆ 5, 20 ನೀಡಿದರೆ 10, 2 ನೀಡಿದರೆ 1… ಹೀಗೆ ಬಹುಮಾನವಾಗಿ ಕೂಡಲು ಹೇಳಿದ ಸಂಖ್ಯೆಯ ಅರ್ಧ ಮಾತ್ರ ಉತ್ತರವಾಗಿ ಉಳಿಯುತ್ತದೆ.)

 

 


Click Here To Download Kannada AP2TG App From PlayStore!