ಪೂಜೆಯಲ್ಲಿ ಕರ್ಪೂರ ಹಾರತಿ ಮಾಡುವುದರ ಹಿಂದಿರುವ ವೈಜ್ಞಾನಿಕ ಕಾರಣವೇನೆಂದು ನಿಮಗೆ ಗೊತ್ತೇ?

ಹಿಂದೂ ಸಂಪ್ರದಾಯದಲ್ಲಿ ಅನೇಕ ಆಚರಣೆಗಳಿರುವ ವಿಷಯ ಎಲ್ಲರಿಗೂ ಗೊತ್ತು.ಅನಾದಿ ಕಾಲದಿಂದಲೂ ಹಿಂದೂಗಳು ಈ ಆಚರಣೆಗಳನ್ನು ತಪ್ಪದೇ ಪಾಲಿಸಿಕೊಂಡು ಬರುತ್ತಿದ್ದಾರೆ.ಮುಖ್ಯವಾಗಿ ದೇವರ ಪೂಜೆ ಮಾಡುವಾಗ ದೀಪ,ಅಗರ ಬತ್ತಿ ಬೆಳಗುವುದು ಕರ್ಪೂರ ಹಾರತಿ ಮಾಡುತ್ತೇವೆ.ಇವೆಲ್ಲದರ ಹಿಂದೆ ವೈಜ್ಙಾನಿಕ ಕಾರಣಗಳಿವೆಯೆಂಬುದನ್ನು ತಿಳಿದುಕೊಂಡಿದ್ದೇವೆ.ಕರ್ಪೂರ ಹಾರತಿ ಮಾಡುವುದಲ್ಲಿ ಅಡಗಿರುವ ವೈಜ್ಞಾನಿಕ ಕಾರಣಗಳೇನು,ಹಾಗೂ ಅದರಿಂದ ನಮಗಾಗುವ ಪ್ರಯೋಜನಗಳೇನು ಎಂಬುದರ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.

  • ಸಿನಮೋಮಮ್ ಕ್ಯಾಂಫೋರ( Cinnamomum Camphora) ಎಂಬ ವೃಕ್ಷದಿಂದ ಕರ್ಪೂರವನ್ನು ತಯಾರಿಸುತ್ತಾರೆ.ಆದರೆ,ಇದನ್ನು ಹೆಚ್ಚಾಗಿ ಹಿಂದೂಗಳು ಪೂಜಾ ಕಾರ್ಯಗಳಲ್ಲಿ ಉಪಯೋಗಿಸುತ್ತಾರೆ.ಪೂಜಾ ಸಮಯದಲ್ಲಿ ಕರ್ಪೂರವನ್ನು ಹಾರತಿಯ ರೂಪದಲ್ಲಿ ದೇವರಿಗೆ ಬೆಳಗುವ ಸಮಯದಲ್ಲಿ ಬರುವ ಹೊಗೆ ದೇಹದ ಆರೋಗ್ಯದ ಮೇಲೆ ಸತ್ಪರಿಣಾಮಗಲನ್ನು ಉಂಟುಮಾಡುತ್ತದೆ.

  • ಕರ್ಪೂರದಿಂದ ಬರುವ ಹೊಗೆಯಿಂದ ಅಸ್ತಮಾ,ಟೈಪಾಯಿಡ್, ಮನಸ್ಸಿನ ದುಗುಡ,ಬೆಚ್ಚಿ ಬೀಳುವಿಕೆ,ಹಿಸ್ಟೀರಿಯಾ,ಕೀಲುಗಳನೋವು ಮೊದಲಾದ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
  • ಈ ಹೊಗೆಯಿಂದ ವಾತಾವರಣದಲ್ಲಿರುವ ಬ್ಯಾಕ್ಟೀರಿಯ,ಸಣ್ಣ ಕ್ರಿಮಿಗಳು,ವೈರಸ್ ಗಳು ನಾಶವಾಗುತ್ತವಂತೆ.ಜ್ಞಾಪಕ ಶಕ್ತಿ ವೃದ್ಧಿಸುತ್ತದೆ,ಚರ್ಮದ ಕಾಯಿಲೆಗಳು ಗುಣವಾಗುತ್ತವೆ.
  • ಕರ್ಪೂರದ ವಾಸನೆ ಕೆಲವರಿಗೆ ಇಷ್ಟವಾಗುವುದಿಲ್ಲ.ಆದರೆ,ಕರ್ಪೂರದ ವಾಸನೆಯನ್ನು ಸ್ವರ್ಗ ಸುಖಕ್ಕೆ ಹೋಲಿಸುತ್ತಾರೆ.ಇದನ್ನು ಉರಿಸುವುದರಿಂದ ಬೂದಿಉಳಿಯದೆ ಸಂಪೂರ್ಣವಾಗಿ ಉರಿದು ಹೋಗುತ್ತದೆ.ಆದುದರಿಂದ ದೇವರ ಪೂಜೆಯಲ್ಲಿ ಉಪಯೋಗಿಸುತ್ತಾರಂತೆ.
  • ಕರ್ಪೂರವನ್ನು ಉರಿಸಿದರೆ ಹೇಗೆ ಸಂಪೂರ್ಣವಾಗಿ ಉರಿದು ಹೋಗುತ್ತದೆಯೋ ಅದೇ ರೀತಿ ಅದರ ಎದುರಿಗೆ ನಿಂತಿರುವವರ ಅಹಂಕಾರವೂ ಉರಿದು ಹೋಗಿ ಪರಿಶುದ್ಧರಾಗುತ್ತಾರಂತೆ.
  • ಕರ್ಪೂರವನ್ನು ಉರಿಸುವುದರಿಂದ ವಾತಾವರಣದಲ್ಲಿ ಧನಾತ್ಮಕ ಶಕ್ತಿ ಏರ್ಪಟ್ಟು ಆ ಶಕ್ತಿ ನಮ್ಮಲ್ಲಿಪ್ರವೇಶಿಸಿ ನಮಗೆ ಒಳ್ಳೆಯದನ್ನುಂಟುಮಾಡುತ್ತದಂತೆ.

 


Click Here To Download Kannada AP2TG App From PlayStore!

Share this post

scroll to top