ಫೋನ್ ಬರದಿದ್ದರೂ.. ರಿಂಗ್ ಆದಂತೆ..? ವೈಬ್ರೇಟ್ ಆದಂತೆ ಅನ್ನಿಸುತ್ತಿದೆಯೇ..? ಆ ರೀತಿ ಯಾಕೆ ಆಗುತ್ತದೆ ಗೊತ್ತಾ?

ನಿಮಗೆ ಫಾಂಟಮ್ ಕಾಲ್ ಇದೆಯೇ.. ಇಲ್ಲವೇ ಫಾಂಟಮ್ ಟೆಕ್ಸ್ಟ್ ಇದೆಯಾ… ಸ್ಮಾರ್ಟ್‍ಫೋನ್‌ನಲ್ಲಿ ಇವು ಹೊಸ ಆಪ್ಸ್ ಎಂದುಕೊಂಡರೆ ತಪ್ಪಾಗುತ್ತದೆ. ನಿಮಗೆ ಫೋನ್ ಆಗಲಿ ಮೆಸೇಜ್ ಆಗಲಿ ಬರದೆ ಮೊಬೈಲ್ ವೈಬ್ರೇಟ್ ಆಗುತ್ತಿದಂತೆ ಅನ್ನಿಸಿದರೆ ಖಚಿತವಾಗಿ ನಿಮಗೆ ಫಾಂಟಮ್ ಕಾಲ್ ಅಥವಾ ಟೆಕ್ಸ್ಟ್ ಇದ್ದಂತೆ… ಕೈಯಲ್ಲಿ ಮೊಬೈಲ್ ಫೋನ್ ಇಲ್ಲದೆ ಒಂದು ಕ್ಷಣವೂ ಇರಲು ಸಾಧ್ಯವಾಗದವರು ಬಹಳಷ್ಟು ಮಂದಿ ಇದ್ದಾರೆ. ಅಂತಹವರಲ್ಲಿ ಖಚಿತವಾಗಿ ಇದು ಕಾಣಿಸುತ್ತದೆ. ಇದು ಕಾಯಿಲೆ ಅಲ್ಲ… ಆದರೆ ಎಚ್ಚರವಹಿಸಬೇಕದ ಅಗತ್ಯ ಇದೆ.

ಬೆಳಗ್ಗೆ ಎದ್ದಾಗಿನಿಂದ ಹಿಡಿದು ರಾತ್ರಿ ಮಲಗುವವರೆಗೂ ಕೈಯಲ್ಲಿ ಮೊಬೈಲ್ ಇರಬೇಕು. ನಿರಂತರ ಅದರಲ್ಲಿ ಏನೋ ಒಂದು ಒತ್ತುತ್ತಲೇ ಇರುತ್ತೇವೆ. ನಮ್ಮ ಸುತ್ತಲೂ ಯಾರು ಇದ್ದಾರೆ ಎಂಬುದನ್ನು ತಲೆಕೆಡಿಸಿಕೊಳ್ಳದೆ ಮೊಬೈಲ್‌ನಲ್ಲೇ ಮುಳುಗುತ್ತೇವೆ. ಕೊನೆಗೆ ಡ್ರಗ್ಸ್‌ ವ್ಯಸನಿಯಾದಂತೆ ಜಗತ್ತಿನ ಶೇ.80ರಷ್ಟು ಮಂದಿ ಮೊಬೈಲ್‌ಗೆ ಅಡಿಕ್ಟ್ ಆಗಿದ್ದಾರೆ. ಮೊಬೈಲ್ ಹೆಚ್ಚಾಗಿ ಬಳಸುವುದು ಕಣ್ಣಿಗೆ ಅದೇ ರೀತಿ ಮಿದುಳಿಗೆ ಒಳ್ಳೆಯದಲ್ಲ ಎಂದು ಗೊತ್ತಿದ್ದರೂ ಈ ಅಭ್ಯಾಸವನ್ನು ಬಿಡುತ್ತಿಲ್ಲ. ಇದರಿಂದಾಗಿ ಅದೆಷ್ಟೋ ನಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಅದರಲ್ಲಿ ಫಾಂಟಮ್ ಕಾಲ್ ಸಹ ಒಂದು.

ಇದರಿಂದ ಅಂತಹ ಸಮಸ್ಯೆ ಇಲ್ಲದಿದ್ದರೂ, ದೀರ್ಘಾವಧಿಯಲ್ಲಿ ಮಾತ್ರ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸುತ್ತಿದ್ದಾರೆ ವೈದ್ಯರು. ನಿತ್ಯ ನಾವು ಮೊಬೈಲ್ ಜತೆಗೇ ಇರುವುದರಿಂದ ಫೋನ್ ಬರದಿದ್ದರೂ ಬಂದಂತೆ, ವೈಬ್ರೇಟ್ ಆಗದಿದ್ದರೂ ಆದಂತೆ ಭ್ರಮೆ ಉಂಟಾಗುತ್ತಿರುತ್ತದೆ. ಇಂತಹ ಲಕ್ಷಣಗಳು ಹೆಚ್ಚಾಗಿ ಟೀನೇಜ್ ವಯಸ್ಸಿನವರಲ್ಲಿ ಹೆಚ್ಚಾಗಿ ಕಾಣಿಸುತ್ತಿದೆ ಎಂದು ಸಮೀಕ್ಷೆಗಳು ತಿಳಿಸುತ್ತಿವೆ. ಆದಕಾರಣ ಸಾಧ್ಯವಾದಷ್ಟು ಕಡಿಮೆ ಮೊಬೈಲ್ ಬಳಸಿದರೆ ಒಳ್ಳೆಯದು. ಮೊಬೈಲ್ ಬಳಕೆಯನ್ನು ನಿಯಂತ್ರಿಸಬೇಕಾದರೆ ಕ್ರೀಡೆಗಳು, ಧ್ಯಾನ ಸಹಕಾರಿಯಾಗುತ್ತದೆ.


Click Here To Download Kannada AP2TG App From PlayStore!