ತಲೆಗೆ ಹೆಲ್ಮೆಟ್ ಹಾಕಿಕೊಂಡು ನಿದ್ರಿಸುತ್ತಿರುವ ಮಹಿಳೆಯರು… ಯಾಕೆಂದು ಗೊತ್ತಾದರೆ ಷಾಕ್..!

ಮಹಿಳೆಯರು ತಮ್ಮ ಜಡೆಯನ್ನು ಬಹಳ ಇಷ್ಟವಾಗಿ ಬೆಳೆಸುತ್ತಾರೆ. ತಮ್ಮ ಕೂದಲನ್ನು ಜೋಪಾನವಾಗಿ ಕಾಪಾಡಿಕೊಳ್ಳುತ್ತಾರೆ. ತಾವು ಸುಂದರವಾಗಿ ಕಾಣಬೇಕೆಂದು ತಮಗೆ ಬೇಕಾದ ರೀತಿಯಲ್ಲಿ ಕೂದಲನ್ನು ಅಲಂಕರಿಸಿಕೊಳ್ಳುತ್ತಾರೆ. ಕೆಲವು ಕೂದಲು ಉದುರಿದರೂ ಸಾಕು ಆಕಾಶವೇ ಮೆಲೆ ಬಿದ್ದಂತೆ ಆಡುತ್ತಾರೆ. ಇಂತಹ ಕೂದಲುಗಳನ್ನು ಅಕಸ್ಮಾತ್ ಯಾರಾದರೂ ಕದ್ದರೆ..? ಹೌದು..ನಮ್ಮ ದೇಶದಲ್ಲಿ ಏನೂ ನಡೆಯಬಹುದು. ಎಲ್ಲ ವಸ್ತುಗಳನ್ನೂ ಕದಿಯುವ ಹಾಗೆ ಕೇಶ ರಾಶಿಯನ್ನೂ ಕದಿಯುವ ಕಳ್ಳರು ತಯಾರಾಗಿದ್ದಾರೆ. ಹಿಂದಿನಿಂದ ಬಂದು ಕೂದಲು ಕತ್ತರಿಸುತ್ತಾರಂತೆ. ಚಿಕ್ಕವರು ದೊಡ್ಡವರೆನ್ನದೆ…ಹೆಣ್ಣಾದರೆ ಸಾಕು ಹಿಂದಿನಿಂದ ಬಂದು ಕೂದಲು ಕತ್ತರಿಸುತ್ತಾರಂತೆ. ಇದುವರೆಗೂ 55 ಮಹಿಳೆಯರ ಕೇಶರಾಶಿಯನ್ನು ಕತ್ತರಿಸಿ ತೆಗೆದುಕೊಂಡು ಹೋಗಿದ್ದಾರೆ. ಈ ಘಟನೆ ಹರ್ಯಾಣ, ರಾಜಸ್ತಾನ್, ದೆಹಲಿ, ಉತ್ತರ ಪ್ರದೇಶ ಮೊದಲಾದ ರಾಜ್ಯಗಳಲ್ಲಿ ಸಂಚಲನವನ್ನು ಉಂಟುಮಾಡಿದೆ. ಆದ್ದರಿಂದಲೇ, ಉತ್ತರ ಭಾರತದಲ್ಲಿ ಮಹಿಳೆಯರು ತಲೆಗೆ ಹೆಲ್ಮೆಟ್ ಹಾಕಿಕೊಂಡು ನಿದ್ದೆಮಾಡುತ್ತಿದ್ದಾರಂತೆ.


ತಮ್ಮ ಸಂಕಟವನ್ನು ಪೊಲೀಸರೊಂದಿಗೆ ಹೇಳಿಕೊಂಡರೆ… ಇದನ್ನು ನಂಬಲಾಗುವುದಿಲ್ಲ ಎಂದು ಕೇಸ್ ನಮೂದಿಸಲು ಒಪ್ಪಲಿಲ್ಲವಂತೆ. ಒಬ್ಬ ಮಹಿಳೆಯ ಕೂದಲು ಸುಮಾರು 3 ಸಾವಿರ ರೂಪಾಯಿಗಳಿಗೆ ಮಾರಾಟವಾಗುತ್ತದಂತೆ. ಹೀಗಾಗಿ ಅವರಿಗೆ ಗೊತ್ತಿಲ್ಲದಂತೆ ಹಿಂದಿನಿಂದ ಬಂದು ಕೂದಲು ಕತ್ತರಿಸಿಕೊಂಡು ಹೋಗುತ್ತಿದ್ದಾರಂತೆ. ಇದಕ್ಕೆ ಸಂಬಂಧಿಸಿದ ವೀಡಿಯೊ ಆನ್ ಲೈನ್ ನಲ್ಲಿ ಸಂಚಲವನ್ನುಂಟುಮಾಡಿದೆ.
ವೀಡಿಯೊ ನೋಡಲು ಇಲ್ಲಿ ಕ್ಲಿಕ್ ಮಾಡಿ..