ಪ್ರತಿದಿನ ಮಲಗುವ ಮುಂಚೆ ಒಂದು ಗ್ಲಾಸ್ ಬಿಸಿ ನೀರಿನಲ್ಲಿ ಈ ಪುಡಿಯನ್ನು ಮಿಕ್ಸ್ ಮಾಡಿಕೊಂಡು ಕುಡಿದರೆ ಯಾವುದೇ ಕಾಯಿಲೆ ನಿಮ್ಮ ಬಳಿ ಬರುವುದಿಲ್ಲ..

ತುಂಬಾ ದಪ್ಪ ಇದ್ದಿರಾ…? ಅಜೀರ್ಣ ಸಮಸ್ಯೆನಾ..? ಮೈಂಡ್ ಮತ್ತು ಬಾಡಿ ಜಡವಾಗಿದೆಯೇ…? ಮಲಬದ್ಧತೆ ಸಮಸ್ಯೆ ಕಾಡುತ್ತಿದೆಯೇ..? ಹಾಗಾದರೆ ಇಂತಹ ಎಷ್ಟೋ ಸಮಸ್ಯೆಗಳನ್ನು ತಡೆಯುವ ಔಷಧಿಯೊಂದನ್ನು ಈಗ ನಿಮ್ಮ ಮನೆಯಲ್ಲೇ ತಯಾರಿಸಿಕೊಳ್ಳಿ‌. ಅದನ್ನು ಮೂರು ತಿಂಗಳ ಕಾಲ ಬಳಸಿದರೆ ಸಾಕು. ನಿಮ್ಮ ಶರೀರದಲ್ಲಿನ ವಿಷ ಪದಾರ್ಥಗಳನ್ನು ಹೊರ ಕಳಿಸುತ್ತವೆ.

ಬೇಕಾಗುವ ಪದಾರ್ಥಗಳು:

  • ಮೆಂತ್ಯ- 250 ಗ್ರಾಂ
  • ಅಜವಾನ(Ajwain)- 100ಗ್ರಾಂ
  • ಕರಿ ಜೀರಿಗೆ- 50 ಗ್ರಾಂ

ತಯಾರಿಸುವ ವಿಧಾನ:
ಮೇಲಿನ ಮೂರು ಪದಾರ್ಥಗಳನ್ನು ಬೇರೆಬೇರೆ ಬಿಸಿ ಮಾಡಬೇಕು, ನಂತರ ಈ ಮೂರನ್ನು ಮಿಕ್ಸಿಯಲ್ಲಿ ಪುಡಿ ಮಾಡಬೇಕು. ಹಾಗೆ ಬಂದ ಪುಡಿಯನ್ನು ಗಾಳಿಯಾಡದ ಬಾಟಲಿಯಲ್ಲಿ ಸಂಗ್ರಹಿಸಿಡಬೇಕು.

ಬಳಸುವ ವಿಧಾನ:
ಪ್ರತಿದಿನ ಊಟದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಒಂದು ಚಮಚ ಈ ಪುಡಿಯನ್ನು ಸೇರಿಸಿ ಕುಡಿಯಬೇಕು. ಇದನ್ನು ಕುಡಿದ ನಂತರ ಏನೂ ಸೇವಿಸಬಾರದು.

ಉಪಯೋಗಗಳು:

  • ಶರೀರದ ಎಲ್ಲಾ ತರದ ವ್ಯರ್ಥ ಪದಾರ್ಥಗಳನ್ನು ಮಲ, ಮೂತ್ರ, ಬೆವರಿನ ಮೂಲಕ ಹೊರ ಕಳಿಸುತ್ತದೆ.
  • ಅಧಿಕ ತೂಕ ಕ್ರಮವಾಗಿ ಕಡಿಮೆಯಾಗುತ್ತದೆ.
  • ರಕ್ತ ಶುದ್ಧಿ ಮಾಡುತ್ತದೆ.
  • ಮೂಳೆಗಳು, ಮಾಂಸಖಂಡಗಳನ್ನು, ಕೀಲುಗಳಿಗೆ ಶಕ್ತಿ ತುಂಬುತ್ತದೆ.
  • ದೃಷ್ಟಿ ಸಮಸ್ಯೆ, ಕೂದಲು ಬೆಳವಣಿಗೆಯಲ್ಲಿ ಬದಲಾವಣೆ ಕಾಣಬಹುದು.
  • ಜ್ಞಾಪಕ ಶಕ್ತಿ, ಶ್ರವಣ ಶಕ್ತಿ ಹೆಚ್ಚುತ್ತದೆ.
  • ಶುಗರ್ ನಿಯಂತ್ರಣಕ್ಕೆ ಬರುತ್ತದೆ.

ಸೂಚನೆ: ಮೂರು ತಿಂಗಳವರೆಗೆ ಈ ಚೂರ್ಣವನ್ನು ಬಳಸಿದ ನಂತರ ಎರಡನೇ ಬಾರಿ ಪ್ರಾರಂಭಿಸುವ ಮೊದಲು 15 ದಿನ ಗ್ಯಾಪ್ ನೀಡಬೇಕು.


Click Here To Download Kannada AP2TG App From PlayStore!

Share this post

scroll to top