ತಲೆದಿಂಬುಗಳನ್ನು,ಟೂತ್ ಬ್ರಶ್ ಗಳನ್ನು ಎಷ್ಟು ದಿನಗಳಿಗೊಮ್ಮೆ ಬದಲಾಯಿಸಬೇಕೆಂದು ನಿಮಗೆ ಗೊತ್ತಾ…?

ಮಲಗುವಾಗ ತಲೆಕೆಳಗೆ ಇರಿಸಿಕೊಳ್ಳುವ ದಿಂಬುಗಳು, ಬೆಳಗಾಗೆದ್ದು ಹಲ್ಲುಜ್ಜಲು ಬಳಸುವ ಟೂತ್ ಬ್ರಶ್ ಇವೆರಡೂ ನಮಗೆ ಅತ್ಯವಶ್ಯಕವಾಗಿ ಬೇಕು. ಆದರೆ, ಇವುಗಳನ್ನು ಎಷು ದಿನಗಳಿಗೊಮ್ಮೆ ಬದಲಾಯಿಸ ಬೇಕೆಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ. ಈ ಪ್ರಶ್ನೆಗಳಿಗೆ ಹಲವು ಪ್ರಮುಖ ವೈದ್ಯರುಗಳು ಹೀಗೆ ಉತ್ತರ ನೀಡುತ್ತಾರೆ. ಅವರು ಹೇಳಿದ ವಿಷಯಗಳೇನೆಂದು ತಿಳಿದುಕೊಳ್ಳೋಣ.

ಸಾಮಾನ್ಯವಾಗಿ ಹತ್ತಿ, ಫೋಮ್, ಸ್ಪ್ರಿಂಗ್… ಹೀಗೆ ಅನೇಕ ವಸ್ತುಗಳನ್ನು ಉಪಯೋಗಿಸಿ ತಲೆದಿಂಬುಗಳನ್ನು ತಯಾರಿಸುತ್ತಾರೆ. ಫೋಮ್ ದಿಂಬುಗಳನ್ನು ಹೊರತು ಪಡಿಸಿ ಇತರೆ ದಿಂಬುಗಳನ್ನು ಉಪಯೋಗಿಸುತ್ತಿದ್ದಲ್ಲಿ, ಒಮ್ಮೆ ದಿಂಬನ್ನು ಮಧ್ಯಕ್ಕೆ ಮಡಚಿ ಬಿಟ್ಟರೆ, ಅವು ಹಿಂದಿನ ಸ್ಥಿತಿಗೆ ಮರಳಿದರೆ ಅಂತಹ ದಿಂಬುಗಳನ್ನು ಮತ್ತೆ ಬಳಸಲು ಯೋಗ್ಯವಾದುವೆಂದು ತಿಳಿಯಬೇಕು. ಹಾಗೆಂದು ಅವೇ ದಿಂಬುಗಳನ್ನು ಹಲವು ವರ್ಷಗಳಕಾಲ ಉಪಯೋಗಿಸಬಾರದು. ದಿಂಬುಗಳು ಸರಿಯಾಗಿದ್ದರೆ ಗರಿಷ್ಟ ಮೂರು ವರ್ಷಗಳ ಕಾಲ ಬಳಸಬಹುದು. ದಿಂಬುಗಳ ಕವರ್ ಗಳನ್ನು ಕನಿಷ್ಠ ವಾರಕ್ಕೆ ಎರಡು ಸಲವಾದರೂ ಒಗೆಯಬೇಕು. ಏಕೆಂದರೆ, ತಲೆಯಲ್ಲಿನ ಧೂಳಿನ ಕಣಗಳು,ಬೆವರು ಸೇರುವುದರಿಂದ ಹಲವು ರೀತಿಯ ಕಾಯಿಲೆಗಳು ಬರಬಹುದು.

ಇನ್ನು ಟೂತ್ ಬ್ರಶ್ ಗಳ ವಿಷಯಕ್ಕೆ ಬಂದರೆ, ಮೂರು ತಿಂಗಳಿಗೆ ಒಮ್ಮೆಯಾದರೂ ಬದಲಾಯಿಸ ಬೇಕೆಂದು ಡೆಂಟಿಸ್ಟ್ ಗಳು ಹೇಳುತ್ತಾರೆ. ಆದರೆ, ಕೆಲವರು ಹಲವಾರು ವರ್ಷಗಳ ಕಾಲ ಒಂದೇ ಟೂತ್ ಬ್ರಶ್ ಉಪಯೋಗಿಸುತ್ತಾರೆ. ಟೂತ್ ಬ್ರಶ್ ಬಾಯಿಯಲ್ಲಿರುವ ಕ್ರಿಮಿಗಳನ್ನು ನಾಶಪಡಿಸುವುದಿಲ್ಲ, ಕೇವಲ ಹಲ್ಲುಗಳ ನಡುವೆ ಇರುವ ಕೊಳೆಯನ್ನು ಹೋಗಲಾಡಿಸಿ ಬಾಯಿಯನ್ನು ಸ್ವಚ್ಛಗೊಳಿಲು ಮಾತ್ರ ಉಪಯೋಗಕ್ಕೆ ಬರುತ್ತದೆ. ಟೂತ್ ಪೇಸ್ಟ್ ನಿಂದಲೇ ನಮ್ಮ ಬಾಯಿಯಲ್ಲಿ ಇರಬಹುದಾದ ಕ್ರಿಮಿಗಳು ನಾಶವಾಗುತ್ತವೆ. ಆದುದರಿಂದ ಟೂತ್ ಬ್ರಶ್ ಗಳನ್ನು ಆಗಿಂದಾಗ್ಗೆ ಬದಲಾಯಿಸಬೇಕು. ಇಲ್ಲವಾದಲ್ಲಿ  ಬ್ರಶ್  ಗಳಲ್ಲಿ ಕ್ರಿಮಿಗಳು ಸೇರಿಕೊಂಡು ಬಾಯಿಯ ಸಮಸ್ಯೆಗಳು ಉಂಟಾಗುತ್ತವೆ.


Click Here To Download Kannada AP2TG App From PlayStore!