ವಾರದಲ್ಲಿ ಯಾವದಿನ ಯಾವ ಬಣ್ಣದ ಬಟ್ಟೆಗಳನ್ನು ಧರಿಸಿದರೆ ಒಳ್ಳೆಯದು ಗೊತ್ತಾ…?

ಈ ಪ್ರಪಂಚ ವಿಭಿನ್ನವಾದ ಮನಃ ಸ್ಥಿತಿಗಳನ್ನು ಹೊಂದಿರುವ ವ್ಯಕ್ತಿಗಳ ಗುಂಪು. ಒಬ್ಬೊಬ್ಬ ವ್ಯಕ್ತಿಯೂ ಒಂದೊಂದು ರೀತಿಯ ಅಭಿರುಚಿ, ಇಷ್ಟ, ಆಯ್ಕೆ ಹೊಂದಿರುತ್ತಾನೆ. ಈ ರೀತಿಯಾಗಿ, ಯಾರಾದರೂ ತಮಗೆ ಇಷ್ಟಕ್ಕೆ ಅನುಗುಣವಾಗಿ ಕೆಲವು ಪ್ರತ್ಯೇಕವಾದ ಬಣ್ಣಗಳ ಬಗ್ಗೆ ಆಸಕ್ತಿ ತೋರುತ್ತಾರೆ. ಆ ಬಣ್ಣಗಳಿಗೆ ತಕ್ಕಂತೆ ಬಟ್ಟೆಗಳನ್ನು ಧರಿಸುತ್ತಾರೆ. ಇಷ್ಟವಾದ ಬಣ್ಣದಿಂದ ಕೂಡಿದ ಬಟ್ಟೆಗಳನ್ನು ಧರಿಸುವುದು ಯಾರಿಗೆ ತಾನೇ ಇಷ್ಟವಿರುವುದಿಲ್ಲ ಹೇಳಿ, ಆದರೆ ನಿಮಗೆ ಗೊತ್ತಾ…? ವಾರದಲ್ಲಿರುವ 7 ದಿನಗಳೂ ಆಯಾ ದಿನಕ್ಕೆ ಅನುಗುಣವಾಗಿ ಕೆಲವು ಬಣ್ಣಗಳ ಬಟ್ಟೆಗಳನ್ನು ಧರಿಸಿದರೆ ಅದರಿಂದ ಎಷ್ಟೋ ಪ್ರಯೋಜನವಿರುತ್ತದೆಯಂತೆ ಅದೇನೆಂಬುದು ಈಗ ತಿಳಿಯೋಣ.

  • ಭಾನುವಾರ: ಈ ದಿನ ಕೆಂಪು ಬಣ್ಣಗಳಿಂದ ಕೂಡಿದ ಬಟ್ಟೆಗಳನ್ನು ಅಥವಾ ಅವುಗಳ ಷೇಡ್ಸ್ ಬಣ್ಣಗಳನ್ನು ಹೊಂದಿರುವ ಬಟ್ಟೆಗಳನ್ನು ಧರಿಸಬೇಕು. ಆ ದಿನದಂದು ಸೂರ್ಯನು ಅಧಿಪತ್ಯದಲ್ಲಿರುತ್ತಾನೆ. ಆದ್ದರಿಂದ ಆ ಬಣ್ಣದ ಬಟ್ಟೆಗಳು ಧರಿಸಿದರೆ ತುಂಬಾ ಒಳ್ಳೆಯದಾಗುತ್ತದೆ.
  • ಸೋಮವಾರ: ಈ ದಿನ ನೀಲಿ, ಬೆಳ್ಳಿ, ಲೈಟ್ ಗ್ರೇ ಬಣ್ಣದ ಬಟ್ಟೆಯನ್ನು ಧರಿಸಬೇಕು. ಈ ದಿನಕ್ಕೆ ಚಂದ್ರನು ಅಧಿಪತಿಯಾಗಿರುತ್ತಾನೆ. ಅಷ್ಟೇಅಲ್ಲದೆ ಸೋಮವಾರ ಶಿವನಿಗೆ ಇಷ್ಟವಾದ್ದರಿಂದ ಮುಂಚೆ ಹೆಳಿದ ಬಣ್ಣದ ಬಟ್ಟೆ ಧರಿಸಿದರೆ ಒಳ್ಳೆಯದು.
  • ಮಂಗಳವಾರ:  ಈ  ದಿನ ಆರೆಂಜ್, ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸಬಹುದು ಈ ದಿನ ಅಂಗಾರಕನು ಅಧಿಪತಿಯಾಗಿರುತ್ತಾನೆ. ಇಂತಹ ಬಣ್ಣದ ಬಟ್ಟೆಗಳನ್ನು ಧರಿಸಿದರೆ ಆ ದಿನ ಖಂಡಿತವಾಗಿಯೂ ಶುಭ ಫಲಿತಾಂಶ ಉಂಟಾಗುತ್ತದೆ.
  • ಬುಧವಾರ:  ಈ ದಿನಕ್ಕೆ ಬುಧಗ್ರಹವು ಅಧಿಪತಿಯಾಗಿರುತ್ತದೆ. ಈ ದಿನ ಹಸಿರು ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಇದರಿಂದ ವಿಜಯ ನಿಮ್ಮ ಸ್ವಂತವಾಗುತ್ತದೆ.
  • ಗುರುವಾರ : ಹಳದಿ(ಅರಿಶಿನ) ಬಣ್ಣದ ಬಟ್ಟೆಗಳನ್ನು ಈ ದಿನ ಧರಿಸಬೇಕು. ಬೃಹಸ್ಪತಿ ಈ ದಿನಕ್ಕೆ ಅಧಿಪತಿಯಾಗಿರುವನು. ಇದರಿಂದ ಹಳದಿ ಬಣ್ಣದ ಬಟ್ಟೆಗಳನ್ನು ಹಾಕಿಕೊಂಡರೆ ಈ ದಿನವೆಲ್ಲವೂ ಒಳ್ಳೆಯದಾಗುತ್ತದೆ. ಬಯಸಿದ್ದೆಲ್ಲಾ ಈಡೇರುತ್ತದೆ.
  • ಶುಕ್ರವಾರ: ಈ ದಿನ ಶುಕ್ರನು ಅಧಿಪತಿಯಾಗಿರುವನು. ಈ ದಿನ ಸಮುದ್ರದ ಹಸಿರು, ಬಿಳಿ, ನೀಲಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಇದರಿಂದ ದಿನವೆಲ್ಲಾ ಶುಭವಾಗುತ್ತದೆ.
  • ಶನಿವಾರ: ಕಪ್ಪು, ನೀಲಿ, ಬೂದಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು ಎಲ್ಲಾ ಒಳ್ಳೆಯದಾಗುತ್ತದೆ. ಈ ದಿನ ಶನಿಗ್ರಹ ಅಧಿಪತಿಯಾಗಿರುತ್ತಾನೆ. ಆದ್ದರಿಂದ ಮೇಲೆ ಹೇಳಿದ ಬಣ್ಣದ ಬಟ್ಟೆಗಳನ್ನು ಧರಿಸಿದರೆ, ನಮ್ಮ ಮೇಲೆ ಯಾವುದೇ ನೆಗೆಟೀವ್ ಪರಿಣಾಮಗಳು ಬೀರುವುದಿಲ್ಲ.

Click Here To Download Kannada AP2TG App From PlayStore!

Share this post

scroll to top