ನಿಮ್ಮ ಕಾಲಿನ ಹೆಬ್ಬೆರಳಿನ ಮೇಲೆ ಕೂದಲುಗಳು ಇವೆಯೋ, ಇಲ್ಲವೋ ಒಮ್ಮೆ ನೋಡಿ ಇವಕ್ಕೂ ಹೃದಯಸಂಬಂಧಿ ಖಾಯಿಲೆಗಳಿಗೂ ಲಿಂಕ್ ಇದೆಯಂತೆ..!

ನಿಮ್ಮ ಕಾಲಿನ ಹೆಬ್ಬೆರಳನ್ನು ಒಮ್ಮೆ ಪರಿಶೀಲಿಸಿ ನೋಡಿ… ಅವುಗಳಿಂದ ತಿಳಿಯುತ್ತದೆ…? ಏನೂ ತಿಳಿಯುತ್ತಿಲ್ವಾ…?ಇನ್ನೊಂದು ಸಾರಿ ನೋಡಿ… ನೋಡುದ್ರಾ…? ಏನಿದೆ…? ಹೆಬ್ಬೆರಳಿನ ಮೇಲೆ ಕೂದಲು ಇವೆಯೇ..? ಅಲ್ಲವಾ…? ಹಾಗಾದರೆ ಎಚ್ಚರ…! ಏಕೆಂದರೆ ನಿಮಗೆ ಹೃದಯ ಸಂಬಂಧಿರೋಗಗಳು ಬರುವ ಅವಕಾಶಗಳು ಅಧಿಕವಾಗಿರುತ್ತವೆ. ಅದೇನು ಕಾಲಿನ ಹೆಬ್ಬೆರೆಳಿನ ಮೇಲಿನ ಕೂದಲಿಗೂ… ಹೃದಯಸಂಬಂಧಿ ಖಾಯಿಲೆಗೂ… ಏನು ಸಂಬಂಧ ಎಂದು ಕೇಳುತ್ತಿದ್ದೀರಾ…? ಆದರೆ ಅದಕ್ಕೂ ಸಂಬಂಧವಿದೆ. ಅದೇನೋ ನೋಡಿ……

ಮೊದಲಿಗೆ ಕೂದಲೂ ಹೇಗೆ ಬೆಳೆಯುತ್ತವೆ. ಎಂಬುದನ್ನು ನೋಡೋಣ. ನಮ್ಮ ಶರೀರದಲ್ಲಿ ಯಾವ ಭಾಗದಲ್ಲಾದರೂ, ಅದಕ್ಕೆ ಸಿಗುವ ಪೋಷಕಾಂಶಗಳಿಂದಲೆ ಬೆಳೆಯುತ್ತವೆ. ಕೂದಲು ಶರೀರದ ಒಳಭಾಗದಿಂದಲೇ ಆರಂಭವಾಗಿತ್ತವೆ. ಹಾಗೆ ಆರಂಭವಾಗಿ ರಕ್ತದ ಸಹಾಯ ತೆಗೆದುಕೊಳ್ಳುತ್ತವೆ. ನಾವು ತಿನ್ನುವ ಆಹಾರದ ಮೂಲಕ ರಕ್ತದಲ್ಲಿ ಸೇರುವ ಪೋಷಕಾಂಶಗಳು ಕೂದಲುಗಳ ಬೇರುಗಳಿಗೆ ಸಿಗುತ್ತವೆ. ಅಲ್ಲಿ ಹೊಸ ಕಣಗಳ ನಿರ್ಮಾಣವಾಗಿ ಕೂದಲೂ ಏರ್ಪಡುತ್ತವೆ. ಹಾಗೆಯೇ ಕಣಗಳು ನಿರ್ಮಾಣವಾದಂತೆ ಸ್ವಲ್ಪ ಕೂದಲೂ ಬೆಳೆಯುತ್ತಾ ಮೇಲೆ ಬರುತ್ತವೆ. ಕೂದಲಿನ ಬೆಳೆವಣಿಗೆ ಹೀಗೆ ನಡೆಯುತ್ತವೆ. ನಮ್ಮ ಶರೀರದಲ್ಲಿನ ಅನೇಕ ಭಾಗದಲ್ಲಿ ಮೇಲೆ ಹೇಳಿದಂತೆ  ಕೂದಲೂ ಬೆಳೆಯುತ್ತವೆ. ಅಲ್ಲಿಯೂ ಸಹ ಮೇಲೆ ತಿಳಿಸಿದಂತೆ ಕೂದಲು ಬೆಳೆಯುತ್ತವೆ. ಆದರೆ ಕೆಲವರಿಗೆ ಬೆಳೆಯುವುದಿಲ್ಲ. ಏಕೆಂದರೆ ರಕ್ತದಿಂದ ಪೋಷಕಾಂಶಗಳು ಸರಿಯಾಗಿ ದೊರೆಯುವುದಿಲ್ಲ. ಹಾಗೆ ಸಿಗದಿರುವುದಕ್ಕೆ ಪ್ರಮುಖ ಕಾರಣವಿದೆ. ಅದೆನೆಂದರೆ ರಕ್ತವನ್ನು ಸರಬರಾಜು ಮಾಡುವ ನಾಳಗಳಾದ ಮಹಾಪಧಮನಿಯಲ್ಲಿ ತೊಂದರೆ ಏರ್ಪಡುವುದು. ಸಾಧಾರಣವಾಗಿ ನಾವು ತಿನ್ನುವ ಆಹಾರದ ಮೂಲಕ ನಮ್ಮ ಶರೀರದಲ್ಲಿ ಎಷ್ಟೋ ಕೊಬ್ಬು ಬೆಳೆಯುತ್ತದೆ. ಹಾಗೆ ಹೆಚ್ಚಿನದು ಮೊದಲಿಗೆ ತಲುಪುವುದು ಮಹಾಪಧಮನಿಗೆ. ಈ ರೀತಿಯಾಗಿ ಮಹಾಪಧಮನಿಯಲ್ಲಿ ಕೊಬ್ಬು ಹೆಚ್ಚಾಗಿ ಬೆಳೆಯುವುದರಿಂದ ರಕ್ತ ಸರಬರಾಜು ಸರಿಯಾಗಿ ಆಗುವುದಿಲ್ಲ. ಇದರಿಂದ ಪೋಷಕಾಂಶಗಳು ಸಹ ಸರಿಯಾಗಿ ಸಿಗದೆ ಕೂದಲೂ ಬೆಳೆಯುವುದಿಲ್ಲ….

ಈಗ ನಾವು ಮೇಲೆ ಹೇಳಿದ ವಿಷಯಕ್ಕೆ ಬರೋಣ.. ಕಾಲಿನ ಹೆಬ್ಬೆರಿಳಿನ ಮೇಲೆ ಕೂದಲು ಬೆಳೆಯುತ್ತಿದ್ದರೆ ಹೃದಯರೋಗಗಳು ಬರುತ್ತವೆಂದು ಹೇಳ್ತಿದ್ವೀ ಅಲ್ವಾ… ಕಾಲಿನ ಹೆಬ್ಬೆಳನ್ನೇ ಏಕೆ ಪರಿಗಣಿಸಬೇಕು ಕೈಗಳ, ಕಾಲುಗಳು, ತಲೆ ಮೇಲೆ ಇರುವ ಕೂದಲನ್ನು ಯಾಕೆ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲಾ..? ಅವುಗಳ ಮೇಲೆ ಕೂದಲೂ ಇಲ್ಲದಿದ್ದರೂ ಹೃದಯ ರೋಗಗಳು ಬರುತ್ತವೆ ಅಲ್ವಾ? ಎಂದು ನೀವು ಕೇಳಬಹುದು. ಆದರೆ ಕಾಲಿನ ಹೆಬ್ಬೆರಳನ್ನೆ ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ಏಕೆಂದರೆ ತಲೆ, ಕೈಗಳು ಹೃದಯಕ್ಕೆ ತುಂಬಾ ಹತ್ತಿರದೆಲ್ಲಿವೆ. ಆದ್ದರಿಂದ ಹೃದಯದಿಂದ ಬರುವ ಒತ್ತಡದಿಂದ ರಕ್ತ ಹೇಗೋ ಅವುಗಳಿಗೆ ಸಿಗುತ್ತದೆ. ಅದಕ್ಕೆ ಅವುಗಳನ್ನು ಪರಿಗಣಿಸುತ್ತಿಲ್ಲ ಆದರೆ ಕಾಲು ಹೃದಯಕ್ಕೆ ತುಂಬಾ ದೂರವಿರುವುದರಿಂದ ಅಲ್ಲಿನವರೆಗೆ ರಕ್ತ ಸರಬರಾಜು ಆಗಬೇಕೆಂದರೆ ಸ್ವಲ್ಪ ಹೆಚ್ಚಿನ ಸಮಯವಾಗುತ್ತದೆ. ಆದ್ದರಿಂದ ಕಾಲಿನ ಹೆಬ್ಬೆರೆಳನ್ನು ಪರಿಗಣಿಸಬೇಕಾಗಿತ್ತದೆ. ಇಲ್ಲಿ ನಮಗೆ ಒಂದು ವಿಷಯ ಅರ್ಥವಾಗುತ್ತದೆ ಅದೇನೆಂದರೆ ಕಾಲಿನ ಹೆಬ್ಬೆರಿಳಿನ ಮೇಲಿರುವ ಕೂದಲು ತುಂಬಾ ಬೆಳದರೆ ಅಲ್ಲಿ ರಕ್ತದ ಸರಬರಾಜು ಚೆನ್ನಾಗಿದ್ದು, ಅವರು ಅರೋಗ್ಯವಂತರೆಂದು ಗಮನಿಸಿ. ಆ ಭಾಗದಲ್ಲಿ ಕೂದಲು ಇಲ್ಲದಿದ್ದರೆ ಅವರಿಗೆ ರಕ್ತದ ಸರಬರಾಜು ಸರಿಯಾಗಿಲ್ಲ ಎಂದು ಅರ್ಥ ಮಾಡಿಕೊಳ್ಳಬೇಕು. ಇದರಿಂದ ಅವರಿಗೆ ಹೃದಯದ ರೋಗಗಳು ಹೆಚ್ಚಾಗಿ ಬರುವ ಅವಕಾಶಗಳಿರುತ್ತವೆ. ಇಂತಹವರು ಬೆಳ್ಳುಳ್ಳಿ ಎಳೆಗಳನ್ನು ದಿನನಿತ್ಯ ತಿಂದರೆ ಅದರಿಂದ ರಕ್ತಪ್ರಸರಣ ವೃದ್ದಿಯಾಗುತ್ತದೆ. ಮಹಾಪಧಮನಿಯಲ್ಲಿ ಸೇರಿಕೊಂಡಿರುವ ಕೊಬ್ಬು ಕಡಿಮೆ ಮಾಡುವ ಶಕ್ತಿ ಬೆಳ್ಳುಳ್ಳಿಗಿದೆ. ಆದ್ದರಿಂದ ನಿಮ್ಮ ಕಾಲಿನ ಹೆಬ್ಬೆರೆಳನ್ನು ಈಗ ಒಮ್ಮೆ ನೋಡಿಕೊಳ್ಳಿ ಯಾವುದೇ ವ್ಯತ್ಯಾಸ ಕಂಡುಬಂದರೂ ಟ್ರೀಟ್ಮೆಂಟ್ ತೆಗೆದುಕೊಳ್ಳಿ. ಹೌದು ಮೇಲೆ ತಿಳಿಸಿದ್ದು ಸುಮ್ಮನೆ ಗಾಳಿಮಾತಲ್ಲ, ಊಹಿಸಿಹೇಳಿದ್ದೂ ಅಲ್ಲ. ಕೆಲವರು ಸೈಂಟಿಸ್ಟ್ ಗಳು ಮಾಡಿದ ಪರಿಶೋಧನೆಗಳ ಸಾರಂಶವನ್ನೇ ಮೇಲೆ ಹೇಳಲಾಗಿದೆ.


Click Here To Download Kannada AP2TG App From PlayStore!

Share this post

scroll to top