ತನ್ನ ಸ್ತನಗಳನ್ನು ಪ್ರೆಸ್ ಮಾಡಿ ಹೋಡಿಹೊಗುತ್ತಿದ್ದ ವ್ಯಕ್ತಿಗೆ ಊಹಿಸದಂತಹ ರೀತಿಯಲ್ಲಿ ಪಾಠ ಕಲಿಸಿದ ಯುವತಿ.!!? #ವಾಸ್ತವ ಘಟನೆ.

ಎಂದಿನಂತೆ ಇಯರ್ ಫೋನ್ ಇಟ್ಟುಕೊಂಡು ಹಾಡುಗಳನ್ನು ಕೇಳುತ್ತಾ ನಡೆದುಕೊಂಡು ಮನೆಗೆ ಹೋಗುತ್ತಿದ್ದೆ. ಎದುರಾಗಿ ಒಬ್ಬ ಯುವಕ ನನ್ನನ್ನೇ ನೋಡುತ್ತಾ, ಒಳಗೊಳಕೆ ನಗುತ್ತಿದ್ದ. ನನ್ನ ಡ್ರೆಸನ್ನು ಒಮ್ಮೆ ಚೆಕ್ ಮಾಡಿಕೊಂಡೆ, ಏನಾದರೂ ವ್ಯತ್ಯಾಸ ಇದೆಯೇನೋ ಅಂತ.? ನನ್ನ ಡ್ರೆಸ್‌ನಲ್ಲಿ ಅಲ್ಲ ಅವನ ನೋಟದಲ್ಲೇ ವ್ಯತ್ಯಾಸ ಎಂದುಕೊಂಡು ಮತ್ತಷ್ಟು ವೇಗವಾಗಿ ಮುಂದೆ ಸಾಗುತ್ತಿದ್ದೆ… ಅಷ್ಟರಲ್ಲೇ ಆತ ವೇಗವಾಗಿ ನನ್ನತ್ತ ಓಡಿಬಂದು ನನ್ನ ಎರಡು ಸ್ತನಗಳನ್ನು ಆತನ ಎರಡು ಕೈಗಳಲ್ಲಿ ಹಿಡಿದು ಬಲವಾಗಿ ಪ್ರೆಸ್ ಮಾಡಿ… ಅಷ್ಟೇ ವೇಗವಾಗಿ ಓಡಿಹೋಗುತ್ತಿದ್ದ.

ನಾನು ಒಮ್ಮೆಲೆ ಶಾಕ್‌ಗೆ ಒಳಗಾದೆ… 20 ಸೆಕೆಂಡ್‌ಗಳ ಕಾಲ ನನಗೆ ಪ್ರಜ್ಞೆ ಕಳೆದುಕೊಂಡಂತಾಗಿತ್ತು. ಕೂಡಲೆ ಎಚ್ಚೆತ್ತುಕೊಂಡು.. ಹೇಯ್ ಥ್ಯಾಂಕ್ಯೂ ವೆರಿ ಮಚ್, ಐ ಲೈಕ್ ಇಟ್ ಎಂದು ಜೋರಾಗಿ ಕೂಗಿದೆ. ಅದನ್ನು ಕೇಳಿದ ಆತ ಚಕಿತಗೊಂಡ. ರಿಯಲಿ ಎಂದ. ಯಸ್, ನಿಜವಾಗಿ ತುಂಬಾ ಖುಷಿಯಾಗಿದೆ, ಇದೊಂದು ಹೊಸ ಅನುಭವದಂತಿದೆ… ಇದನ್ನು ಕೇಳಿದ ಆತ ಒಂದು ಕ್ಷಣವೂ ಆಲೋಚಿಸದೆ ಕೂಡಲೆ ನನ್ನ ಬಳಿಗೆ ಬಂದ.

ನನ್ನ ಬಳಿಗೆ ಬಂದ ಆತನ ಕಂಕುಳಲ್ಲಿ ನನ್ನ ಎರಡೂ ಕೈಗಳಿಂದ ಹಿಡಿದುಕೊಂಡೆ. ಅಪ್ಪಿಕೊಳ್ಳುತ್ತಿದ್ದಾನೇನೋ ಅಂದುಕೊಂಡ.. ಇದೇ ಸಮಯ ನೋಡಿ ನನ್ನ ಮೊಳಕಾಲಿನಿಂದ ಆತನ ಸೆಂಟರ್ ಪಾಯಿಂಟ್ ಮೇಲೆ ಜೋರಾಗಿ ಒಂದು ಕೊಟ್ಟೆ… ಅಲ್ಲಿಯವರೆಗೂ ಕಾಮದಿಂದ ಕುದಿಯುತ್ತಿದ್ದ ಆತನ ಫೇಸ್… ಕೆಂಪು ಬಣ್ಣಕ್ಕೆ ತಿರುಗಿತು. ಅದರ ನೋವು ಅಲ್ಲಿ ರಿಫ್ಲೆಕ್ಟ್ ಆಗುತ್ತಿದ್ದಂತೆ ಕಾಣಿಸಿತು. ಸೆಂಟರ್ ಪಾಯಿಂಟ್ ಹಿಡಿದು ಕೆಳಗೆ ಬಿದ್ದು ವಿಲವಿಲ ಹೊಡೆದುಕೊಳ್ಳುತ್ತಿದ್ದ. ಮತ್ತೆ ಇಯರ್ ಫೋನ್ ಹಾಕಿಕೊಂಡು ಹಾಡು ಕೇಳುತ್ತಾ ನಾನು ನಮ್ಮ ಮನೆ ಕಡೆಗೆ ಹೊರಟೆ.


Click Here To Download Kannada AP2TG App From PlayStore!