ನಿಮ್ಮ ದೇಹದ ತೂಕವನ್ನು ಕಡಿಮೆಯಾಗ ಬೇಕೆ? ಹಾಗಾದರೆ, ಕಾಫಿಗೆ ಇದನ್ನು ಸ್ವಲ್ಪ ಬೆರೆಸಿ.ಶೀಘ್ರ ಫಲಿತಾಂಶ!!

ದೇಹದ ತೂಕ ಕಡಿಮೆ ಮಾಡಿಕೊಳ್ಳುವುದು ನಿರಂತರ ಪ್ರಕ್ರಿಯೆ. ತೂಕ ಇಳಿಸಿಕೊಳ್ಳುವ ಹಠ ಕೆಲವರಲ್ಲಿದ್ದರೂ ಸರಿಯಾದ ತಿಳುವಳಿಕೆಯಿಲ್ಲದೆ, ವರ್ಷಗಳ ಕಾಲ ಪ್ರಯತ್ನಿಸಿದರೂ ಸಫಲರಾಗುವುದಿಲ್ಲ. ಕೇವಲ ವ್ಯಾಯಾಮ,ವರ್ಕೌಟ್ ಗಳೇ ಶರೀರದ ತೂಕ ಕಳೆಯುವ ಮಾರ್ಗಗಳು ಎಂದು ಭಾವಿಸುತ್ತಾರೆ.ಆದರೆ, ಅದು ಸಂಪೂರ್ಣ ನಿಜವಲ್ಲ. ಒಂದು ಸಲ ಶರೀರದ ತೂಕ ಹೆಚ್ಚಾದರೆ, ಮೈಯಲ್ಲಿ ಕೊಬ್ಬು ಶೇಖರಣೆಗೊಂಡು, ಬೊಜ್ಜು ಬಂತೆಂದರೆ, ಕಡಿಮೆಮಾಡಿಕೊಳ್ಳಲು ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗಿರುತ್ತದೆ. ವಿಚಿತ್ರವೆಂದರೆ, ಕೇವಲ ಸಣ್ಣ ಪುಟ್ಟ ಮಾರ್ಪಾಡುಗಳಿಂದಲೇ ಉತ್ತಮ ಫಲಿತಾಂಶ ಸಿಗುತ್ತದೆ. ಆದರೆ, ಸಲಹೆಗಳು ನಮಗೆ ದೊರೆಯ ದಿರುವುದೇ ದೊಡ್ಡ ಸಮಸ್ಯೆ.
ಅತ್ಯಂತ ಸುಲಭವಾಗಿ ಶರೀರದ ಅಧಿಕ ಭಾರವನ್ನು ಕಡಿಮೆಯಾಗಿಸುವ ಸುಲಭ ಉಪಾಯದ ಬಗ್ಗೆ ತಿಳಿದುಕೊಳ್ಳೋಣ.


ದಿನಾಲೂ ನಾವು ತಲೆಗೆ ಹಚ್ಚಿಕೊಳ್ಳಲು ಉಪಯೋಗಿಸುವ ಕೊಬ್ಬರಿ ಎಣ್ಣೆ ಯಲ್ಲದೆ , ಅಡುಗೆ ತಯಾರಿಸಲು ಉಪಯೋಗಿಸುವ ಕೊಬ್ಬರಿ ಎಣ್ಣೆಯೂ ಸಿಗುತ್ತದೆ. ಇದರಲ್ಲಿ ಮೀಡಿಯಂ ಚೈನ್ ಫ್ಯಾಟೀ ಆಸಿಡ್ಸ್ ಎಂಬ ಪದಾರ್ಥವಿದ್ದು, ಹೃದಯ ಹಾಗೂ ದೇಹದಲ್ಲಿ ಕೊಬ್ಬು ಶೇಖರಣೆ ಗೊಳ್ಳುವುದನ್ನು ತಡೆಯುತ್ತದೆ ಹಾಗೂ ಕೆಟ್ಟ ಕೊಲೆಸ್ಟ್ರಾಲ್ ನ್ನು ಕರಿಗಿಸುತ್ತದೆ. ದೇಹದಲ್ಲಿರುವ ಅನಗತ್ಯ ಕೊಬ್ಬನ್ನು ಕಡಿಮೆಗೊಳಿಸಲು ಸಹಕಾರಿ. ಕೊಬ್ಬರಿ ಎಣ್ಣೆ ಯಲ್ಲಿರುವ ವಿಟಮಿನ್ ಇ ಚರ್ಮವನ್ನು ರಕ್ಷಿಸಿ, ಹೊಳಪು ನೀಡುತ್ತದೆ.
ಕೆಳಗೆ ತಿಳಿಸಿದ ರೀತಿಯಲ್ಲಿ ಕಾಫೀ ಮಾಡಿಕೊಂಡು ಕುಡಿಯುವುದರಿಂದಲೂ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳ ಬಹುದೆಂದು ತಜ್ಞರು ಹೇಳುತ್ತಾರೆ.
ಅತಿ ಶೀಘ್ರವಾಗಿ ತೂಕ ಇಳಿಸುಕೊಳ್ಳುವ ಹೊಸ ಟ್ರೆಂಡ್ ಇದು. ಕಾಫಿಯಲ್ಲಿ ಕೊಬ್ಬರಿ ಎಣ್ಣೆಯನ್ನು ಬೆರೆಸಿ ಕುಡಿಯುವುದರಿಂದ ಅತಿ ವೇಗವಾಗಿ ತೂಕ ಕಡಿಮೆಯಾಗುತ್ತದಂತೆ. ಕಾಫಿಯಲ್ಲಿರುವ ಕೆಫೀನ್, ಕ್ಯಾಲೊರಿಗಳನ್ನು ಕರಿಗಿಸಲು ಸಹಕಾರಿ. ಕೆಫೀನನ್ನು ಮಿತವಾಗಿ ಸೇವಿಸಿದರೆ ದೇಹವನ್ನು ಚುರುಕಾಗಿ ಇರಿಸಿಕೊಂಡು ತೂಕವನ್ನು ಕಡಿಮೆ ಮಾಡಿಕೊಳ್ಳ ಬಹುದಂತೆ.
ಇತರೆ ಎಣ್ಣೆಗಳಲ್ಲಿರುವ ಕೊಬ್ಬು ಲಾಂಗ್ ಚೈನ್ ಫ್ಯಾಟೀ ಅಸಿಡ್ ಆಗಿ ಪರಿವರ್ತನೆಗೊಂಡರೆ, ಕೊಬ್ಬರಿ ಎಣ್ಣೆ ಯಲ್ಲಿರುವ ಕೊಬ್ಬು ಮೀಡಿಯಂ ಚೈನ್ ಫ್ಯಾಟೀ ಆಸಿಡ್ ಆಗಿ ಪರಿವರ್ತನೆಗೊಳ್ಳುತ್ತದೆ. ಇವುಗಳನ್ನು ಯಕೃತ್ತ್ (ಲಿವರ್) ಶಕ್ತಿಯನ್ನಾಗಿ ಇಲ್ಲವೇ ಕೀಟೋನ್ ಗಳನ್ನಾಗಿ ಬದಲಾಯಿಸುತ್ತದಂತೆ. ನಿಜ ಹೇಳಬೇಕೆಂದರೆ, ಕಾಫೀ, ಟಿ ಮುಂತಾದುವುಗಳನ್ಣು ಕುಡಿಯಲೇ ಬಾರದು. ಆದರೂ ಆಭ್ಯಾಸ ಬಲದಿಂದ ಕುಡಿಯಲೇ ಬೇಕೆನಿಸುತ್ತದೆ . ಅಂತಹವರು ಬೆಳಿಗ್ಗೆ ಕಾಫಿ ಕುಡಿಯುವಾಗ ಕೊಬ್ಬರಿ ಎಣ್ಣೆ ಸೇರಿಸಿ ಕುಡಿಯುವುದರಿಂದ ಒಳ್ಳೆಯ ಫಲಿತಾಂಶ ಸಿಗುತ್ತದೆ. ಕೇವಲ ಎರಡು ಚಮಚ ಕೊಬ್ಬರಿ ಎಣ್ಣೆಯನ್ನು ಬೆರೆಸುವುದರಿಂದ ಕಾಫಿಯ ರುಚಿಯಲ್ಲೇನೂ ಅಂತಹ ದೊಡ್ಡ ವ್ಯತ್ಯಾಸ ಕಂಡುಬರುವುದಿಲ್ಲ. ಹೀಗೆ ಕಾಫಿ ಕುಡಿದು ವರ್ಕೌಟ್ ಮಾಡಿದರೂ ಬೇಗ ದಣಿಯುವುದಿಲ್ಲವೆಂದು ತಜ್ಞರು ಹೇಳುತಾರೆ.