ಇದು ಯುದ್ಧದಲ್ಲಿ ಹೋರಾಡಿದ ಸೈನಿಕನ ಹೆಂಡತಿಯ ಅಂತರಂಗ…..

ಉರಿಯಲ್ಲಿ ಉಗ್ರರ ದಾಳಿಯ ಬಗ್ಗೆ ತಿಳಿದಾಗ ಟಿವಿಯ ಮುಂದೆ ಇರುವ ನಾವೆಲ್ಲ ಆ ದಾಳಿಯನ್ನು ಖಂಡಿಸಿದ್ದೇವೆ. ವೀರ ಮರಣ ಹೊಂದಿದ ಸೈನಿಕರ ಆತ್ಮ ಶಾಂತಿಸಬೇಕೆಂದು ನಾವು ಸೋಷಿಯಲ್ ಮೀಡಿಯಾಗಳಲ್ಲಿ ಹಲವರು ಪೊಸ್ಟ್’ಗಳನ್ನು ಹಾಕಿ ಶೇರ್ ಕೂಡ ಮಾಡಿದ್ದೇವೆ. ಮತ್ತೆ ಸೈನಿಕರು ಸರ್ಜಿಕಲ್ ಸ್ಟ್ರೈಕ್ ಹೆಸರಿನಲ್ಲಿ ಪಾಕ್ ಮೇಲೆ ದಾಳಿಯನ್ನು ಮಾಡಿದಾಗ ಸಹ ಶಹಭಾಷ್ ಎಂದು ಮೆಚ್ಚುಕೊಂಡಿದ್ದೇವೆ. ಮತ್ತೆ ಪೊಸ್ಟ್’ಗಳನ್ನು ಸಹ ಹಾಕಿದ್ದೇವೆ. ನಮ್ಮ ದೇಶವನ್ನು ಕಾಯುವ ಸೈನಿಕರ ಬಗ್ಗೆ ಎಲ್ಲೋ ಇರುವ ನಾವು ಇಷ್ಟೆಲ್ಲಾ ಯೋಚಿಸಿತ್ತೇವೆ. ಇನ್ನೂ ಅಂಥಹ ಪರಿಸ್ಥಿಯಲ್ಲಿ ಇರುವ ಸೈನಿಕರ ಕುಟುಂಬದವರು ಅವರ ಬಗ್ಗೆ ಇನ್ನೇಷ್ಟು ಯೋಚನೆ ಮಾಡಬೇಕು..? ಒಮ್ಮೆ ಊಹಿಸಿ. ನೆನಸಿಕೊಂಡರೆ ಎಷ್ಟೋ ಟೆನ್ಶನ್, ಆತಂಕ ಉಂಟಾಗುತ್ತದೆ. ಅದಕ್ಕಿಂತ ಮೀರಿದ ಟೆನ್ಶನ್ ಸೈನಿಕರ ಕುಟುಂಬಕ್ಕೆ ಇರುತ್ತದೆ.!

ಆರ್ಮಿಯಲ್ಲಿ ಇರುವ ತಮ್ಮ ಗಂಡ, ಅಪ್ಪ, ಅಮ್ಮ ಇಲ್ಲವೇ ಅಕ್ಕ, ತಮ್ಮನಿಗೆ ಏನಾಗಿದೆ ಎಂದು ತೀವ್ರ ಆತಂಕದಲ್ಲಿ , ಭಯದಲ್ಲಿ ಕುಟುಂಬಗಳು ಜೀವನವನ್ನು ಸಾಗಿಸುತ್ತಾರೆ. ಅವರ ಕ್ಷೇಮದ ವಿಚಾರ ತಿಳಿಯುವವರೆಗೂ ನೆಮ್ಮದಿಯಿಂದ ನಿದ್ದೆ ಮಾಡಲು ಸಹ ಆಗುವುದಿಲ್ಲ. ಅಂತಹ ಒತ್ತಡದಲ್ಲಿ ಸೈನಿಕರ ಕುಟುಂಬಗಳು ಇರುತ್ತವೆ. ಇಂಥಹ ಒಂದು ಕುಟುಂಬಕ್ಕೆ ಸೇರಿದ ಸೈನಿಕನ ಹೆಂಡತಿ ತನ್ನ ಗಂಡ ಆರ್ಮಿಯಲ್ಲಿ ಇದ್ದಾಗ ಎಷ್ಟು ಟೆನ್ಶನ್ ಇರುತ್ತೆ ಅದನ್ನು ಸೋಷಿಯಲ್ ಮೀಡಿಯಾ ಮುಖಾಂತರ ಹಂಚಿಕೊಂಡಿದ್ದಾರೆ. ಇಷ್ಟಕ್ಕೂ ಅವರು ಏನು ಹೇಳಿದ್ದಾರೆ ಎಂದರೆ…

ಅವರ ಹೆಸರು ನೇಹ ಕಶ್ಯಪ್. ಆತನ ಹೆಸರು ಭಾನು ಪ್ರತಾಪ್. ಒಬ್ಬ ಯುವತಿಯಿಂದ ಅವರಿಬ್ಬರಿಗೆ ಪರಿಚಯವಾಯಿತು. ಅದು ಪ್ರೀತಿಯಾಗಿ ಬದಲಾಗಿ ಮದುವೆಯವರೆಗೂ ಬಂದಿದೆ. ಈ ಕ್ರಮದಲ್ಲಿ ಭಾನುಪ್ರತಾಪ್ ಆರ್ಮಿ ಸೇರುವುದು ಹಾಗೂ ಇವರಿಬ್ಬರಿಗೆ ಮದುವೆ ಸಹ ಆಗಿದೆ. ನೇಹಾ ಕಶ್ಯಪ್ ರವರು ಲಾಯರ್ ಆಗಿ ಪ್ರಾಕ್ಟೀಸ್ ಆರಂಭಿಸಿದರು. ಆರ್ಮಿ ಯಲ್ಲಿ ಇರುವುದರ ಕಾರಣ ಭಾನುಪ್ರತಾಪ್ ರವರಿಗೆ ಬೇರೆ ಬೇರೆ ಕಡೆ ಜಾಬ್ ಪೋಸ್ಟಿಂಗ್ ಲಭಿಸುತ್ತಿತ್ತು. ಇದರಿಂದ ಮನೆಗಳನ್ನು ಬದಲಾಯಿಸುವುದು, ಇತರೆ ಕೆಲಸಗಳನ್ನು ನೋಡಿಕೊಳ್ಳುವುದು ತುಂಬಾ ಕಷ್ಟಕರವಾಗಿತ್ತು. ಆಕೆ ಪ್ರಾಕ್ಟೀಸ್ ಸಹ ಸರಿಯಾಗಿ ಮಾಡಲಾಗಲಿಲ್ಲ. ಇದರಿಂದ ಅವರಿಬ್ಬರು ಒಂದು ನಿರ್ಣಯಕ್ಕೆ ಬಂದರು. ಮುಂಬೈಗೆ ಹೋಗಿ ಸೆಟ್ಟಲ್ ಆಗಬೇಕೆಂದುಕೊಂಡರು. ಹಾಗೆಯೇ ಮಾಡಿದರು. ಆದರೆ ಭಾನುಪ್ರತಾಪ್’ರವರು ದೇಶ ರಕ್ಷಣೆಗಾಗಿ ಎಲ್ಲಿಗೆ ಕಳುಹಿಸಿದರೆ ಅಲ್ಲಿಗೆ ಹೋಗುತ್ತಿದ್ದರು. ಹೀಗೆ ದೇಶ ಸುತ್ತುತ್ತಿರುವ ಕಾರಣ ಅವರಿಬ್ಬರು 4 ತಿಂಗಳಿಗೊಮ್ಮೆ ಭೇಟಿಯಾಗುತ್ತಿದ್ದರು. ಪ್ರತಿ 4 ತಿಂಗಳಿಗೊಮ್ಮೆ ಬರುವಾಗ 15 ದಿನಗಳು ರಜೆ ತೆಗೆದುಕೊಂಡು ಬರುತ್ತಿದ್ದರು. ನಂತರ ಗಡಿ ಕಾಯುವುದಕ್ಕೆ ಹೊರಡುತ್ತಿದ್ದರು.

ಆದರೆ ಈಗೆಲ್ಲಾ ವಾಟ್ಸಪ್, ಫೇಸ್ಬುಕ್ ಸ್ಮಾರ್ಟ್’ಫೋನ್’ಗಳು ಬಂದಿವೆ. ಅಂದಿನ ದಿನಗಳಲ್ಲಿ ಅವರ ಕ್ಷೇಮ ವಿಚಾರಗಳನ್ನು ಪತ್ರಗಳ ಮುಖಾಂತರ ಮಾತ್ರ ತಿಳಿದುಕೊಳ್ಳಬೇಕಿತ್ತು. ಅದಕ್ಕಾಗಿ ಕುಟುಂಬದವರು ಹಲವು ದಿನಗಳವರೆಗೆ ಕಾಯಬೇಕಿತ್ತು. ಹಾಗೆಯೇ ನೇಹಾ ತನ್ನ ಗಂಡನ ಪತ್ರಗಳಿಗೋಸ್ಕರ ಕಾಯುತ್ತಿದ್ದರು. ಅದನ್ನು ಓದಿದ ಮೇಲೆ ತಾನು ತನ್ನ ಗಂಡನ ಜೊತೆಗೆ ಇರುವ ಖುಷಿ ಅವರಿಗಾಗುತ್ತಿತ್ತು. ಯುದ್ಧ, ದಾಳಿಗಳು ನಡೆದಾಗ ಆತಂಕಗೊಳ್ಳುತ್ತಿದ್ದರು. ಕ್ಷೇಮದ ವಿಚಾರ ತಿಳಿದ ಮೇಲೆ ನಿಮ್ಮದಿಯಿಂದ ನಿದ್ದೆ ಮಾಡುತ್ತಿದ್ದರು. ಆದರೆ ದುರದೃಷ್ಟವಶಾತ್ ಅವರು ಪ್ರಾಣವನ್ನು ಕಳೆದುಕೊಂಡರು. ಆದರೂ ನೇಹರವರು ಧೈರ್ಯದಿಂದ ಇದ್ದಾರೆ. ಅವರಿಗೆ ತನ್ನ ಗಂಡ ದೇಶಕ್ಕೊಸ್ಕರ ಹೋರಾಡಿ ವೀರ ಮರಣಹೊಂದಿದ್ದಾರೆ ಎಂಬ ಹೆಮ್ಮೆಯಿದೆ. ಅಷ್ಟೊಂದು ಹೆಮ್ಮೆ ಸೈನಿಕರ ಕುಟುಂಬಗಳಿಗೆ ಇರುತ್ತದೆ ಎಂದರೆ ಅತಿಶಯೊಕ್ತಿಯಲ್ಲ …
ಜೈ ಜವಾನ್….


Click Here To Download Kannada AP2TG App From PlayStore!